ಬ್ಲಾಕ್​ಫಂಗಸ್​ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ದಂಪತಿ!

masthmagaa.com:

ಕೊರೋನಾ ಮತ್ತು ಬ್ಲಾಕ್​ ಫಂಗಸ್​ಗೆ ಹೆದರಿದ ದಂಪತಿ ಅಪಾರ್ಟ್​ಮೆಂಟ್​​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮೃತರನ್ನ ರಮೇಶ್ ಮತ್ತು ಗುಣವತಿ ಅಂತ ಗುರುತಿಸಲಾಗಿದೆ. ಆತ್ಮಹತ್ಯೆಗೂ ಮೊದಲು ಪತಿ ರಮೇಶ್ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿ ಕುಮಾರ್​ಗೆ ಫೋನ್ ಮಾಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಅವರು ಪೊಲೀಸರನ್ನ ಸ್ಥಳಕ್ಕೆ ಕಳಿಸಿದ್ರೂ ಅದಾಗಲೇ ದಂಪತಿ ಆತ್ಮಹತ್ಯೆಗೆ ಶರಣಾಗಿದ್ರು. ಸ್ಥಳದಲ್ಲಿ ಡೆತ್​ನೋಟ್ ಸಿಕ್ಕಿದ್ದು, ಅದರಲ್ಲಿ ಬ್ಲಾಕ್ ಫಂಗಸ್​ನಿಂದ ಕಣ್ಣು ಮತ್ತು ದೇಹದ ಇತರ ಭಾಗಗಳನ್ನ ಕಳೆದುಕೊಂಡಿದ್ದನ್ನ ನೋಡಿದ್ರೆ ಭಯವಾಗುತ್ತೆ. ನಮ್ಮ ಆರೋಗ್ಯದಲ್ಲಿ ಆಗುತ್ತಿರೋ ಬದಲಾವಣೆ ಕೂಡ ಕೊರೋನಾ ಮತ್ತು ಬ್ಲಾಕ್​ ಫಂಗಸ್​​ ರೀತಿ ಇದೆ. ಆಸ್ಪತ್ರೆಗೆ ಹೋಗಲು ಹೆದರಿಕೆ ಆಗ್ತಿದೆ. ಆಸ್ಪತ್ರೆಗೆ ಹೋದ್ರೂ ಸೇಫಾಗಿ ವಾಪಸ್ ಬರ್ತೀವಿ ಅನ್ನೋ ಗ್ಯಾರಂಟಿ ಇಲ್ಲ. ಹೀಗಾಗಿ ನಮಗೆ ಜೀವನವೇ ಬೇಡವಾಗಿದೆ. ನಮ್ಮ ಅಂತ್ಯಕ್ರಿಯೆಗಾಗಿ ಕುಟುಂಬಸ್ಥರಿಗೆ ಸಮಸ್ಯೆ ಆಗೋದು ಬೇಡ. ಇಂಥವರು ಇಂಥವರು ಅಂತ್ಯಕ್ರಿಯೆ ನೆರವೇರಿಸಲಿ ಅಂತ ಬರೆದಿದ್ದಾರೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply