ಆಯುಧಪೂಜೆ ದಿನದಂದೆ ಮಣಿಪುರದಲ್ಲಿ ರಾಶಿ-ರಾಶಿ ಶಸ್ತ್ರಾಸ್ತ್ರಗಳು ಸೀಜ಼್! ಭರ್ಜರಿ ಕಾರ್ಯಾಚರಣೆ!

masthmagaa.com:

ಹಿಂಸಾಚಾರ ಪೀಡಿತ ಈಶಾನ್ಯ ರಾಜ್ಯ ಮಣಿಪುರದಲ್ಲಿ ನಡೆಸಿದ ಪೊಲೀಸ್‌ ಕಾರ್ಯಚರಣೆಯಲ್ಲಿ ಇಬ್ಬರು ಬಂಡುಕೋರರು ಸೇರಿದಂತೆ ಹಲವು ಆಯುಧಗಳನ್ನ ವಶಪಡಿಸಿಕೊಳ್ಳಲಾಗಿದೆ. ಮಣಿಪುರ್‌ ಪೊಲೀಸ್-‌CAPF ಸಿಬ್ಬಂಧಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಯನ್ಮಾರ್‌ ಮೂಲದ ಚಿನ್‌ ಕುಕಿ ಲಿಬರೇಶನ್‌ ಆರ್ಮಿ(CKLA) ಬಂಡುಕೋರ ಗುಂಪಿನ ಇಬ್ಬರು ಸದಸ್ಯರು ಅರೆಸ್ಟ್‌ ಆಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಮಣಿಪುರ ಸಿಎಂ ಎನ್.‌ ಬಿರೇನ್‌ ಸಿಂಗ್‌, “ಬಂಡುಕೋರರಿಂದ AK47, ಇನ್ಸಾಸ್ ರೈಫಲ್, ಸ್ನೈಪರ್‌ಗಳು, M16 ರೈಫಲ್‌ ಹಾಗೂ ಬೃಹತ್‌ ಮದ್ದು-ಗುಂಡುಗಳ ರಾಶಿ ಸೇರಿದಂತೆ 2.5 ಕೆಜಿ ಮಾದಕವಸ್ತುಗಳು, 4.8 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಇದ್ರಿಂದ ಮಣಿಪುರ ಹಾಗೂ ಇಡೀ ದೇಶದಲ್ಲಿ ಅಸ್ಥಿರತೆ ಮೂಡಿಸುವಲ್ಲಿ ವಿದೇಶಿ ಕೈಗಳು ನಡೆಸುತ್ತಿರೋ ಸಂಚುಗಳ ಬಗ್ಗೆ ಗೊತ್ತಾಗುತ್ತೆ” ಅಂತ ಹೇಳಿದ್ದಾರೆ. ಇದೇ ವೇಳೆ ಮಣಿಪುರದಲ್ಲಿ ಶಾಂತಿ ಕದಡಲು, ಭಾರತ ಸರ್ಕಾರದ ವಿರುದ್ಧ ಯುದ್ಧ ಸಾರಲು ಮಯನ್ಮಾರ್‌, ಬಾಂಗ್ಲಾದೇಶಗಳಲ್ಲಿನ ಉಗ್ರ ಸಂಘಟನೆಗಳು ನಡೆಸುತ್ತಿರೋ ಪಿತೂರಿಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ತನಿಖೆ ನಡಿಸುತ್ತಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply