ವಿಮಾನ ದುರಂತ: ಲ್ಯಾಟಿನ್ ಸಿಂಗರ್ ಮೇರಿಲಿಯಾ ಮೆಂಡೋನ್ಸಾ ಸಾವು

masthmagaa.com:

ಲ್ಯಾಟಿನ್ ಭಾಷೆಯ ಪಾಪ್ ಮೆಗಾಸ್ಟಾರ್, ಗ್ರಾಮಿ ಅವಾರ್ಡ್ ವಿನ್ನರ್ ಮೇರಿಲಿಯಾ ಮೆಂಡೊನ್ಸಾ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇವರಿಗೆ ಜಸ್ಟ್ 26 ವರ್ಷ ವಯಸ್ಸಾಗಿತ್ತು. ‘Sertanejo’ ಖ್ಯಾತಿಯ ಮೇರಿಲಿಯಾ ಹಾರುತ್ತಿದ್ದ ಸಣ್ಣ ವಿಮಾನ, ಬ್ರಸಿಲ್‌ನ ಮಿನಾಸ್ ಗೆರಾಯಿಸ್ ರಾಜ್ಯದಲ್ಲಿ ಪತನ ಆಗಿದೆ. ಇದೆ ಅಪಘಾತದಲ್ಲಿ ಒಬ್ಬ ಮ್ಯೂಸಿಕ್ ಆಲ್ಬಮ್ ಪ್ರೊಡ್ಯೂಸರ್ ಹಾಗೂ ಗಾಯಕಿ ಮೇರಿಲಿಯಾ ಅವರ ಅಂಕಲ್ ಹಾಗೂ ಇಬ್ಬರು ಪೈಲಟ್ ಗಳು ಕೂಡ ಮೃತಪಟ್ಟಿದ್ದಾರೆ. ವಿಮಾನ ಪತನಕ್ಕೆ ಕಾರಣ ಏನು ಅನ್ನೋದು ಇನ್ನೂ ಕೂಡ ಸ್ಪಷ್ಟವಾಗಿಲ್ಲ. ಆದರೆ ನೆಲಕ್ಕೆ ಅಪ್ಪಳಿಸುವ ಮೊದಲು ತೀರಾ ಕೆಳಮಟ್ಟದಲ್ಲಿ ಹಾರಿದ ವಿಮಾನ ವಿದ್ಯುತ್‌ ಟವರ್‌ಗೆ ಡಿಕ್ಕಿ ಹೊಡೆದು ನಂತರ ಕೆಳಗೆ ಬಿದ್ದಿದೆ ಅಂತ ಸ್ಥಳೀಯ ಪೊಲೀಸ್ ಚೀಫ್, ಇವಾನ್ ಲೋಪೆಝ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply