ಕ್ಯಾಲಿಫೋರ್ನಿಯಾ, ಗ್ರೀಸ್​​ನಲ್ಲಿ ದೊಡ್ಡಮಟ್ಟದಲ್ಲಿ ಕಾಡ್ಗಿಚ್ಚು!

masthmagaa.com:

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಕಾಡ್ಗಿಚ್ಚು ಸಂಭವಿಸಿದೆ. ರಾಜ್ಯದಲ್ಲಿ ಈವರೆಗೆ ಸಂಭವಿಸಿದ 2ನೇ ಅತಿದೊಡ್ಡ ಕಾಡ್ಗಿಚ್ಚು ದುರಂತ ಇದಾಗಿದೆ. ಸಾವಿರಾರು ಮಂದಿಯನ್ನು ಸ್ಥಳಾಂತರ ಮಾಡಲಾಗಿದ್ದು, ಬೆಂಕಿಯ ಜ್ವಾಲೆಯಿಂದ ಪಾರಾಗಿದ್ದಾರೆ. ಆದ್ರೆ 8 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗ್ತಿದೆ. 463,477 ಎಕರೆಯಷ್ಟು ಪ್ರದೇಶ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ. ಇನ್ನು ಟರ್ಕಿ ಮತ್ತು ಗ್ರೀಸ್​​ ಕೂಡ ಕಳೆದೆರಡು ವಾರಗಳಿಂದ ಕಾಡ್ಗಿಚ್ಚಿನಿಂದ ಪರದಾಡ್ತಿದೆ. ಗ್ರೀಸ್​​ನ ಎವಿಯಾ ಐಲ್ಯಾಂಡ್​ನಲ್ಲಿ ಕಾಡ್ಗಿಚ್ಚಿಗೆ ಸಾವಿರಾರು ಮಂದಿ ಮನೆ ಕಳೆದುಕೊಂಡಿದ್ದಾರೆ. ಈ ನಡುವೆ ಬೆಂಕಿ ನಂದಿಸೋ ಕಾರ್ಯದಲ್ಲಿ ನಿರತವಾಗಿದ್ದ ಹೆಲಿಕಾಪ್ಟರ್ ಒಂದು ಪತನಗೊಂಡಿದ್ದು, ಪುಣ್ಯಕ್ಕೆ ಯಾರಿಗೂ ಏನೂ ಆಗಿಲ್ಲ.

-masthmagaa.com

Contact Us for Advertisement

Leave a Reply