ಸೂರ್ಯ ಕಾರಿದ್ದಾನೆ ಭಾರೀ ಬೆಂಕಿ! ಭೂಮಿಯ ಮೇಲೆ ಮೊಬೈಲ್, GPSಗೆ ಪೆಟ್ಟು?

masthmagaa.com:

ಸೂರ್ಯನಿಂದ ಬೃಹತ್ ಸೌರ ಜ್ವಾಲೆಯೊಂದು ಹೊರಕ್ಕೆ ಸಿಡಿದಿದೆ. ಇದು ಭೂಮಿಯ ಮೇಲೆ ಟೆಲಿ ಕಮ್ಯುನಿಕೇಶನ್ ಹಾಗೂ ಜಿಪಿಎಸ್ ಮೇಲೆ ಪರಿಣಾಮ ಉಂಟುಮಾಡೋ ಶಕ್ತಿ ಹೊಂದಿದೆ ಅಂತ ವರದಿಯಾಗಿದೆ. ಈ ಬಗ್ಗೆ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಸ್ಪೇಸ್ ಸೈನ್ಸಸ್ ಇಂಡಿಯಾ ಮಾಹಿತಿ ನೀಡಿದೆ. ಈ ಸೌರಜ್ವಾಲೆ ಅಥ್ವಾ ಸೋಲಾರ್ ಫ್ಲೇರ್‌ ಅನ್ನ X2.2 Class ಗೆ ಸೇರಿಸಲಾಗಿದೆ. ನಾಸಾದ ಪ್ರಕಾರ ಬೃಹತ್‌ ಜ್ವಾಲೆಗಳನ್ನ X-Class ಜ್ವಾಲೆಗಳು ಅಂತ ಕರೆಯಲಾಗುತ್ತೆ. ಸೌರ ಜ್ವಾಲೆಗಳ ಸಾಮರ್ಥ್ಯಗಳ ಮೇಲೆ A,B,C,M ಮತ್ತು X ಜ್ವಾಲೆಗಳ ಅಂತ ವರ್ಗೀಕರಿಸಲಾಗಿದೆ. ಈ ಸೌರ ಜ್ವಾಲೆಗಳು ಶಕ್ತಿಯುತ ಸ್ಫೋಟಗಳಾಗಿವೆ. ಹಾಗೂ ಅವು ರೇಡಿಯೊ ಸಂವಹನಗಳು, ಉಪಗ್ರಹಗಳ ಕೆಲಸ, ವಿದ್ಯುತ್ ಗ್ರಿಡ್‌ಗಳು, ಬಾಹ್ಯಾಕಾಶ ನೌಕೆ ಮತ್ತು ಗಗನಯಾತ್ರಿಗಳಿಗೆ ಅಪಾಯವನ್ನ ತಂದೊಡ್ಡುತ್ತವೆ.

-masthmagaa.com

Contact Us for Advertisement

Leave a Reply