ಭಾರತದಲ್ಲಿರುವ ಇನ್ನಷ್ಟು ಕೆನಡಾ ಅಧಿಕಾರಿಗಳನ್ನ ಮೆನೆಗೆ ಕಳಿಸ್ತೀವಿ: ಕೇಂದ್ರ ಸರ್ಕಾರ

masthmagaa.com:

ಭಾರತ ಹಾಗೂ ಕೆನಡ ನಡುವಿನ ರಾಜತಾಂತ್ರಿಕ ಸಂಘರ್ಷ ಮುಂದುವರೆದಿದೆ. ಇದೀಗ ಭಾರತದಲ್ಲಿರೋ ಹೆಚ್ಚುವರಿ ಕೆನಡಾ ಅಧಿಕಾರಿಗಳನ್ನ ಎತ್ತಂಗಡಿ ಮಾಡಿಸೋದಾಗಿ ಭಾರತ ಹೇಳಿದೆ. ಈ ಕುರಿತು ಮಾತನಾಡಿರೋ ವಿದೇಶಾಂಗ ವಕ್ತಾರ ಅರಿಂಧಮ್‌ ಬಗ್ಚಿ, ʻನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೆನಡಾ ಅಧಿಕಾರಿಗಳಿದ್ದಾರೆ. ಕೆನಡಾದಲ್ಲಿ ಇರುವ ಭಾರತದ ಅಧಿಕಾರಿಗಳ ಸಂಖ್ಯೆಗೂ ಭಾರತದಲ್ಲಿ ಇರುವ ಕೆನಡ ಅಧಿಕಾರಿಗಳ ಸಂಖ್ಯೆಗೂ ದೊಡ್ಡ ವ್ಯತ್ಯಾಸ ಇದೆ. ಈ ವ್ಯತ್ಯಾಸವನ್ನ ಸರಿ ಮಾಡೋಕೆ ಅಥವಾ ಅವರ ಸಂಖ್ಯೆಯನ್ನ ಕಡಿಮೆ ಮಾಡೋಕೆ ನಾವು ಕ್ರಮ ತಗೋತೀವಿ ಅಂತ ಹೇಳಿದ್ದಾರೆ. ಇದೇ ವೇಳೆ ಹೆಚ್ಚಾಗಿರೋ ಕೆನಡ ಅಧಿಕಾರಿಗಳು ದೇಶದ ಆಂತರಿಕ ವಿಚಾರಗಳಲ್ಲಿ ಹೆಚ್ಚು ಮೂಗು ತೂರಿಸ್ತಿದ್ದಾರೆ ಅಂತನೂ ಹೇಳಿದಾರೆ. ಆ ಮೂಲಕ ಇನ್ನಷ್ಟು ಕೆನಡಾ ರಾಜತಾಂತ್ರಿಕರನ್ನ ವಾಪಾಸ್‌ ಅವರ ದೇಶಕ್ಕೆ ಅಟ್ಟೋದಾಗಿ ಭಾರತ ಪರೋಕ್ಷವಾಗಿ ಹೇಳಿದೆ.

ಇತ್ತ ಪಂಜಾಬ್‌ ಮೂಲದ ಕೆನಡಾ ಗಾಯಕ ಶಭ್‌ನೀತ್‌ ಸಿಂಗ್‌ ಅವರು ಖಲಿಸ್ತಾನಿಗಳಿಗೆ ಸಪೋರ್ಟ್‌ ಮಾಡ್ತಾರೆ ಅಂತ ಆರೋಪಿಸಿ ಭಾರತದಲ್ಲಿ ನಡೆಯಲಿದ್ದ ಅವರ ಸಂಗೀತ ಕಾರ್ಯಕ್ರಮವನ್ನ ರದ್ದು ಮಾಡಲಾಗಿತ್ತು. ಇದಕ್ಕೆ ಶುಭ್‌ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ ಖಲಿಸ್ತಾನಿ ಪಾತಕಿ ಅಮೃತ್‌ಪಾಲ್‌ ಅರೆಸ್ಟ್‌ಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುವ ಟೈಮ್‌ನಲ್ಲಿ ಪ್ರೇ ಫಾರ್‌ ಪಂಜಾಬ್‌ ಅಂತ ಈ ಗಾಯಕ ಪೋಸ್ಟ್‌ ಹಾಕೊಂಡಿದ್ದ. ಆ ಪೋಸ್ಟ್‌ನಲ್ಲಿ ಜಮ್ಮು ಕಾಶ್ಮೀರ, ಪಂಜಾಬ್‌ ಹಾಗೂ ಈಶಾನ್ಯ ರಾಜ್ಯಗಳೇ ಇಲ್ಲದ ಭಾರತದ ಮ್ಯಾಪ್‌ ಇತ್ತು. ಅದನ್ನ ಶುಭ್‌ನೀತ್‌ ಸಿಂಗ್ ಶೇರ್‌ ಮಾಡಿದ್ದ. ಈ ವಿಚಾರಕ್ಕೆ ಈತ ಭಾರತಕ್ಕೆ ಬರೋದು ಬೇಡ ಅನ್ನೋ ಆಕ್ಷೇಪ ವ್ಯಕ್ತವಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಶುಭ್‌, ಪಂಜಾಬ್‌ನಲ್ಲಿ ವಿದ್ಯುತ್‌, ಇಂಟರ್‌ನೆರ್ಟ್‌ ಸೇವೆ ಸ್ಥಗಿತಗೊಂಡಿರುವುದಾಗಿ ವರದಿಗಳು ಬಂದಿದ್ದವು. ಹೀಗಾಗಿ ಪಂಜಾಬ್‌ಗಾಗಿ ಪ್ರಾರ್ಥಿಸಿ ಅಂತ ಬರೆದಿದ್ದೆ. ಆದ್ರೆ ಖಂಡಿತವಾಗಿಯೂ ನಾನು ಯಾರ ಭಾವನೆಗಳನ್ನು ನೋಯಿಸುವ ಉದ್ದೇಶ ಹೊಂದಿರಲಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply