ಮೇಘನಾ ರಾಜ್‌ ಹುಟ್ಟುಹಬ್ಬದ ವಿಶೇಷವಾಗಿ ತತ್ಸಮ ತದ್ಬವʼ ಸಿನಿಮಾದ ಹೊಸ ಪೋಸ್ಟ್‌ರ್‌ ರಿಲೀಸ್‌ !

masthmagaa.com:

ನಟಿ ಮೇಘನಾ ರಾಜ್‌ ಅವರಿಗೆ ಇಂದು (ಮೇ 3) ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ಮೇಘನಾ ರಾಜ್‌ ಅಭಿನಯದ ʻತತ್ಸಮ ತದ್ಬವʼ ಸಿನಿಮಾದ ಹೊಸ ಪೋಸ್ಟರ್‌ ರಿವೀಲ್‌ ಮಾಡಲಾಗಿದೆ. ʻತತ್ಸಮ ತದ್ಭವʼ ಸಿನಿಮಾದಲ್ಲಿ ಮೇಘನಾ ರಾಜ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಹೊಸ ಪೋಸ್ಟರ್‌ನಲ್ಲಿ ಮೇಘನಾ ರಾಜ್‌ ತೋಟದ ಮಧ್ಯೆ ನಿಂತು, ಕೈಯಲ್ಲಿ ಟಾರ್ಚ್‌ ಹಿಡಿದುಕೊಂಡು ಏನನ್ನೋ ಹುಡುಕುತ್ತಿದ್ದಾರೆ.

ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾದ ಶೂಟಿಂಗ್‌ ಮುಗಿದಿದೆ. ಈ ಸಿನಿಮಾವನ್ನು ವಿಶಾಲ್‌ ಆತ್ರೇಯ ನಿರ್ದೇಶನ ಮಾಡಿದ್ದಾರೆ. ಪನ್ನಗ ಭರಣ ಸಿನಿಮಾ ನಿರ್ಮಾಣ ಮಾಡಿದ್ದಾರೆ. ವಾಸುಕಿ ವೈಭವ್‌ ಸಂಗೀತ್‌ ಸಂಯೋಜನೆ ಮಾಡಿದ್ದಾರೆ. ಹಿರಿಯ ನಟಿ ಶೃತಿ ಸೇರಿದಂತೆ ಅನೇಕ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

-masthmagaa.com

Contact Us for Advertisement

Leave a Reply