ದೆಹಲಿ ಹಿಂಸಾಚಾರಕ್ಕೆ ರೈತ ಸಂಘಟನೆಗಳು ಹೇಳಿದ್ದೇನು..?

masthmagaa.com:

ದೆಹಲಿಯಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರೈತ ಸಂಘಟನೆ ಮುಖಂಡರು ಮಾತನಾಡಿದ್ದಾರೆ. ಹಿಂಸಾಚಾರ ಮಾಡ್ದೋರು ಯಾರು ಅಂತ ನಾವು ಕಂಡುಹಿಡಿದಿದ್ದೀವಿ. ಅವರೆಲ್ಲಾ ರಾಜಕೀಯ ಪಕ್ಷದವರು. ನಮ್ಮ ಹೋರಾಟಕ್ಕೆ ಕೆಟ್ಟ ಹೆಸರು ತರಲು ಹೀಗೆ ಮಾಡಿದ್ದಾರೆ ಅಂತ ಭಾರತೀಯ ಕಿಸಾನ್​​ ಯೂನಿಯನ್ ಹೇಳಿದೆ. ಮತ್ತೊಂದು ರೈತ ಸಂಘಟನೆ, ಸಂಯುಕ್ತ ಕಿಸಾನ್ ಮೋರ್ಚಾದವರು ಮಾತನಾಡಿ, ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸ್ತಿದ್ವಿ. ಆದ್ರೆ ಕೆಲವೊಂದು ಸಮಾಜಘಾತುಕ ಶಕ್ತಿಗಳು ನಮ್ಮ ಪ್ರತಿಭಟನೆಯಲ್ಲಿ ಹೀಗೆ ಮಾಡಿವೆ ಅಂತ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಯಾವುದಾದ್ರೂ ಸಮಸ್ಯೆಗೆ ಹಿಂಸೆ ಅನ್ನೋದಿ ಸೊಲ್ಯೂಷನ್ ಅಲ್ಲ. ಯಾರಿಗೆ ಗಾಯವಾದ್ರೂ ಅದು ದೇಶಕ್ಕಾಗುವ ನಷ್ಟ. ದೇಶದ ಹಿತಕ್ಕಾಗಿ ಮೂರು ಕೃಷಿ ಕಾನೂನುಗಳನ್ನ ವಾಪಸ್ ಪಡೀರಿ ಅಂತ ಹೇಳಿದ್ದಾರೆ. ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ದೆಹಲಿಯಲ್ಲಿ ಹೀಗೆಲ್ಲಾ ಮಾಡ್ದೋರು ರೈತರಲ್ಲ. ಅವರು ಭಯೋತ್ಪಾದಕರು. ಅವರಿಗೆ ಉಗ್ರ ಸಂಘಟನೆಗಳ ಬೆಂಬಲವಿದೆ. ಕಾಂಗ್ರೆಸ್ ಪಕ್ಷದ ಬೆಂಬಲವಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply