ಹೌಡಿ ಮೋದಿ ನೋಡಿ ಉರಿದ ಪಾಕ್ ಹೇಳಿದ್ದೇನು..?

ಅಮೆರಿಕದ ಹ್ಯೂಸ್ಟನ್‍ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮ ಯಶಸ್ಸು ನೋಡಿ ಪಾಕಿಸ್ತಾನ ಫುಲ್ ಉರಿದುಕೊಂಡಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಹಾಗೂ ಹೌಡಿ ಮೋದಿ ಎಂಬ ಯಶಸ್ವಿ ಕಾರ್ಯಕ್ರಮದಂದ ಹತಾಶೆಗೊಂಡಿದೆ. ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿ ಫವಾದ್ ಹುಸೇನ್ ಚೌಧರಿ, ಇದೊಂದು ಫ್ಲಾಪ್ ಶೋ ಎಂದು ಕರೆದಿದ್ದಾರೆ. ಹೌಡಿ ಮೋದಿ ಕಾರ್ಯಕ್ರಮದಲ್ಲಿ ಮೋದಿಯ ಪ್ರದರ್ಶನ ನಿರಾಶಾದಾಯಕವಾಗಿದೆ. ಬಿಲಿಯನ್‍ಗಳಷ್ಟು ಹಣ ಚೆಲ್ಲಿ ಅಮೆರಿಕಾ, ಕೆನಡಾ ಮತ್ತು ಇತರ ಹಲವು ದೇಶಗಳಿಂದ ಜನರನ್ನು ಒಟ್ಟುಗೂಡಿಸಲಾಗಿತ್ತು. ಹಣದಿಂದ ಎಲ್ಲವನ್ನು ಕೊಳ್ಳಲು ಆಗದು ಎಂಬುದನ್ನು ಈ ಕಾರ್ಯಕ್ರಮ ತೋರಿಸಿದೆ ಎಂದು ಟ್ವೀಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಅಮೆರಿಕದಲ್ಲಿ ಅದ್ಧೂರಿ ಸ್ವಾಗತ ದೊರೆತಿದ್ರೆ, ಮತ್ತೊಂದು ಕಡೆ ಶನಿವಾರ ವಾಷಿಂಗ್ಟನ್‍ಗೆ ಬಂದಿಳಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಸ್ವಾಗತಿಸಲು ಅಮೆರಿಕದ ಒಬ್ಬ ಅಧಿಕಾರಿಯೂ ಬರಲಿಲ್ಲ. ಇದರಿಂದ ಪಾಕ್ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಅನುಭವಿಸಿದೆ.

Contact Us for Advertisement

Leave a Reply