ಶಮಿಗೆ ಗಾಳ ಹಾಕಿತ್ತು IPL ತಂಡ!ಬೌಲರ್‌ ಮೊಹಮದ್‌ ಶಮಿಗೆ ಆಗಿದ್ದೇನು?

masthmagaa.com:

ಕಳೆದ IPL ಟೂರ್ನಿಯಲ್ಲಿ ಪರ್ಪಲ್‌ ಕ್ಯಾಪ್‌ ಪಡೆದು, ಏಕದಿನ ವಿಶ್ವಕಪ್‌ನಲ್ಲೂ ಅತಿ ಹೆಚ್ಚು ವಿಕೆಟ್‌ ಪಡೆದು ಯಶಸ್ಸಿನ ಉತ್ತುಂಗದಲ್ಲಿರೋ ಮಾರಕ ಬೌಲರ್‌ ಮೊಹಮದ್‌ ಶಮಿಗೆ, IPL ಫ್ರಾಂಚೈಸಿಯೊಂದು ಆಮಿಷ ಒಡ್ಡಿತ್ತು ಅಂತ ತಿಳಿದು ಬಂದಿದೆ. ಗುಜರಾಜ್‌ ಟೈಟನ್ಸ್‌ ತಂಡದ ಜೊತೆ ಟ್ರೇಡಿಂಗ್‌ ಮಾಡದೆ ಡೈರೆಕ್ಟಾಗಿ ಶಮಿ ಅವ್ರನ್ನೇ ಈ ತಂಡ ಅಪ್ರೋಚ್‌ ಮಾಡಿದೆ ಅಂತ GT COO (chief operating officer) ಕರ್ನಲ್‌ ಅರ್ವಿಂದ್‌ ಸಿಂಗ್‌ ಹೇಳಿಕೆ ನೀಡಿದ್ದಾರೆ. ಆದ್ರೆ ಅದು ಯಾವ ತಂಡ ಅಂತ ಹೇಳಿಲ್ಲ. ಆದ್ರೆ ಆ ತಂಡ ಹೀಗೆ ಮಾಡಿದ್ದು BCCI ನಿಯಮಗಳ ವಿರುದ್ಧವಾಗಿದೆ ಅಂತ ಸಿಂಗ್‌ ಹೇಳಿದ್ದಾರೆ. ಬೇರೆ ತಂಡವನ್ನ ಸೇರೋ ಇಚ್ಛೆ ಮೊದಲು ಆಟಗಾರನಿಂದ ವ್ಯಕ್ತವಾಗ್ಬೇಕು. ಅದಾದ ನಂತರ ಹಲವು ಪ್ರೊಸೀಜರ್‌ಗಳಿವೆ. ಈ ರೀತಿ ವಾಮಮಾರ್ಗದಲ್ಲಿ ಗಾಳ ಹಾಕಿ ಮೀನು ಹಿಡಿಯೋ ಕೆಲಸ ಮಾಡ್ಬಾರ್ದು ಅಂತ ಸಿಂಗ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply