ಮಲೆನಾಡಿನಲ್ಲಿ ಮತ್ತೆ ಮಂಗನ ಖಾಯಿಲೆ ಭೀತಿ! ಕಾಫೀನಾಡಲ್ಲಿ ಪತ್ತೆಯಾಯ್ತು ʻಕ್ಯಾಸನೂರು ರೋಗʼ!

masthmagaa.com:

ಮಲೆನಾಡಿನಲ್ಲಿ ಮತ್ತೆ ಮಂಗನ ಖಾಯಿಲೆ ಭೀತಿ ಶುರುವಾಗಿದೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದೆ. ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆ ವ್ಯಕ್ತಿಯ ಸ್ಯಾಂಪಲ್‌ಅನ್ನ ಆರೋಗ್ಯ ಇಲಾಖೆ ಟೆಸ್ಟ್​ಗೆ ಕಳುಹಿಸಿತ್ತು. ಅದರ ವರದಿ ಬಂದಿದ್ದು ಕ್ಯಾಸನೂರು ಕಾಡಿನ ಖಾಯಿಲೆ ಅಥವಾ ಮಂಗನಖಾಯಿಲೆ ಅನ್ನೋದು ಧೃಡಪಟ್ಟಿದೆ. ಸದ್ಯ ಪತ್ತೆಯಾದ ವ್ಯಕ್ತಿ ಇದ್ದ ಸ್ಥಳ ಅವರ ಸಂಪರ್ಕಕ್ಕೆ ಬಂದವರ ಮೇಲೆ ನಿಗಾ ಇಡಲಾಗಿದೆ. ಅಂದಹಾಗೆ ಈ ಮಂಗನ ಕಾಯಿಲೆ ಶಿವಮೊಗ್ಗದ ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ 1957ರಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಸೈಬೀರಿಯದಿಂದ ವಲಸೆ ಬಂದ ಹಕ್ಕಿಗಳು ಈ ವೈರಸ್ ಅನ್ನು ಇಲ್ಲಿಗೆ ತಂದಿದೆ ಅಂತ ವಿಜ್ಞಾನಿಗಳು ಹೇಳ್ತಾರೆ. Flaviviridae ಅನ್ನೋ ಕುಟುಂಬಕ್ಕೆ ಸೇರಿದ ಈ ವೈರಸ್ ಕೋತಿಯಲ್ಲಿ ಮೊದಲು ಪತ್ತೆಯಾದ್ದರಿಂದ ಇದನ್ನ ಮಂಗನ ಕಾಯಿಲೆ ಅಂತಲೇ ಕರೆಯಲಾಗುತ್ತೆ. ಈ ರೋಗ ಹೇನು, ಚಿಗಟ-ಒಣುಗು, ತಿಗಣೆ, ಸೊಳ್ಳೆ ಇತ್ಯಾದಿ ರಕ್ತ ಹೀರುವ ಕೀಟಗಳಿಂದ ಹರಡುತ್ತೆ. ಅರಣ್ಯ ಪ್ರದೇಶಗಳಲ್ಲಿ ಕೋತಿ, ಹೆಗ್ಗಣ ಇತ್ಯಾದಿ ಪ್ರಾಣಿಗಳಿಗೆ ಸೋಂಕು ತಗುಲಿದರೆ ಹಾರುವ ಕೀಟಗಳ ಮೂಲಕ ಅದು ಬೇರೆ ಬೇರೆ ಪ್ರಾಣಿಗಳಿಗೆ ಸುಲಭವಾಗಿ ಹರಡುವ ಸಾಧ್ಯತೆ ಇರುತ್ತೆ. ಇನ್ನು ವಿಪರೀತ, ಜ್ವರ, ಮೈಕೈ ನೋವು, ತಲೆನೋವು, ನರದೌರ್ಬಲ್ಯ, ಆಯಾಸ, ಬಾಯಿ, ವಸಡು ಮೂಗು ಹಾಗೂ ಕರುಳಿನಲ್ಲಿ ರಕ್ತಸ್ರಾವ ಈ ರೋಗದ ಲಕ್ಷಣಗಳು.

-masthmagaa.com

Contact Us for Advertisement

Leave a Reply