ಪೆಟ್ರೋಲ್ 13 ರೂಪಾಯಿ, ಡೀಸೆಲ್ 19 ರೂಪಾಯಿ ಇಳಿಕೆ!

masthmagaa.com:

ನಿರಂತರವಾಗಿ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೀಪಾವಳಿಗೆ ಡಬಲ್​ ಧಮಾಕಾ ನೀಡಿವೆ. ಒಂದು ಲೀಟರ್​ ಪೆಟ್ರೋಲ್​ ದರ ಸುಮಾರು 13 ರೂಪಾಯಿ ಕಮ್ಮಿ ಮಾಡಿದ್ದು, ಡೀಸೆಲ್​ ದರ ಸುಮಾರು 19 ರೂಪಾಯಿ ಕಮ್ಮಿ ಮಾಡಿದೆ. ಒಂದ್ಕಡೆ, ಕೇಂದ್ರ ಸರ್ಕಾರ ನಿನ್ನೆ ರಾತ್ರಿಯಷ್ಟೇ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನ 5 ರೂಪಾಯಿ ಮತ್ತು ಡೀಸೆಲ್​ ಮೇಲಿನ ಅಬಕಾರಿ ಸುಂಕವನ್ನ 10 ರೂಪಾಯಿ ಕಡಿತ ಮಾಡಿತ್ತು.
ಇದರ ಪರಿಣಾಮ ಟೋಟಲ್ ಮೇಲೆ ರಾಜ್ಯ ಹಾಕ್ತಿದ್ದ ಸೇಲ್ಸ್ ಟ್ಯಾಕ್ಸ್’ನ ಅಮೌಂಟ್ ಕೂಡ ಆಟೋಮ್ಯಾಟಿಕ್ ಕಮ್ಮಿಯಾಗಿ ಟೋಟಲ್ 6.29 ಕಮ್ಮಿ ಆದಂಗಾಯ್ತು.
ಇದರ ಮೇಲೆ ಮತ್ತೆ ರಾಜ್ಯ ಸರ್ಕಾರ ತನ್ನ ಕಡೆಯಿಂದ ಪೆಟ್ರೋಲ್​ ಮತ್ತು ಡೀಸೆಲ್​ ಎರಡರ ಮೇಲಿನ ಸೇಲ್ಸ್ ಟ್ಯಾಕ್ಸ್ 7 ರೂಪಾಯಿ ಕಮ್ಮಿ ಮಾಡಿದೆ. ಅಲ್ಲಿಗೆ ಬೆಂಗಳೂರಿನಲ್ಲಿ ಪೆಟ್ರೋಲ್​ ರೇಟ್​ 113.93 ಇದ್ದಿದ್ದು ಮೊದಲು 107.64 ರೂಪಾಯಿಗೆ ಇಳಿದು, ಮತ್ತೆ ಇಂದು ಮಧ್ಯರಾತ್ರಿಯಿಂದ 100.64 ರೂಪಾಯಿಗೆ ಇಳಿಯುತ್ತೆ. ಡೀಸೆಲ್​ 104.50 ಇದ್ದಿದ್ದು 92.03 ರೂಪಾಯಿಗೆ ಇಳಿದು, ಮತ್ತೆ ಇಂದು ಮಧ್ಯರಾತ್ರಿಯಿಂದೇ 2ನೇ ಇಳಿಕೆಯಾಗಿ 85.03 ರೂಪಾಯಿ ಆಗುತ್ತೆ.
ಈ ಕ್ರಮದಿಂದ ಕೇಂದ್ರಕ್ಕೆ ವಾರ್ಷಿಕವಾಗಿ ಸುಮಾರು 1.40 ಲಕ್ಷ ಕೋಟಿ ಖೋತಾ ಆಗಲಿದೆ. ರಾಜ್ಯ ಸರ್ಕಾರಕ್ಕೆ 2,100 ಕೋಟಿ ಖೋತಾ ಆಗಲಿದೆ ಅಂತ ಅಂದಾಜಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ತೆರಿಗೆ ಕಡಿತ ಮಾಡಿದ ಹಿನ್ನೆಲೆ ಒಂದು ಲೀಟರ್​ ಪೆಟ್ರೋಲ್​ ದರ ಸುಮಾರು 13 ರೂಪಾಯಿ ಮತ್ತು ಡೀಸೆಲ್​ ದರ ಸುಮಾರು 19 ರೂಪಾಯಿ ಕಮ್ಮಿಯಾದಂತಾಗಿದೆ.

ಈ ಬಗ್ಗೆ ಮಾತನಾಡಿರೋ ಸಿಎಂ ಬಸವರಾಜ ಬೊಮ್ಮಾಯಿ, ಜನರಿಗೆ ಕೇಂದ್ರದ ಮೋದಿ ಸರ್ಕಾರ ದೀಪಾವಳಿ ಗಿಫ್ಟ್ ಕೊಟ್ಟಿದೆ. ಅದನ್ನ ಸ್ವಾಗತಿಸುತ್ತಾ ನಾವು ಕೂಡ ತೆರಿಗೆಯನ್ನ ಕಮ್ಮಿ ಮಾಡಿದ್ದೇವೆ. ಅದ್ರಲ್ಲೂ ಡೀಸೆಲ್​ ಮೇಲೆ ಒಟ್ಟು 19 ರೂಪಾಯಿ ಕಮ್ಮಿಯಾಗಿರೋದ್ರಿಂದ ಆರ್ಥಿಕತೆಗೆ ಮತ್ತಷ್ಟು ವೇಗ ಸಿಗಲಿದೆ ಎಂದಿದ್ದಾರೆ. ಅತ್ತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಮಾತನಾಡಿ, ಇದು ದೀಪಾವಳಿ ಗಿಫ್ಟ್ ಅಲ್ಲ. ಮೊದಲು ಪಿಕ್​ ಪಾಕೆಟ್​ ಮಾಡ್ತಿದ್ರು. ಅದನ್ನ ಈಗ ನಿಲಿಸಿದ್ದಾರೆ ಅಷ್ಟೇ ಅಂತ ವ್ಯಂಗ್ಯವಾಡಿದ್ದಾರೆ.

-masthmagaa.com

Contact Us for Advertisement

Leave a Reply