ತನ್ನ ಆರು ಮಕ್ಕಳನ್ನ ಬಾವಿಗೆ ದೂಡಿ ಸಾಯಿಸಿದ ಮಹಾತಾಯಿ!

masthmagaa.com:

ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು ಆದ್ರೆ ಕೆಟ್ಟ ತಾಯಿ ಇರಲು ಸಾಧ್ಯ ಇಲ್ಲ ಅಂತ ಹೇಳ್ತಾರೆ. ಆದ್ರೆ ಈ ಮಾತನ್ನ ಇಲ್ಲೊಬ್ಬ ತಾಯಿ ಸುಳ್ಳಾಗಿಸಿದ್ದಾಳೆ. ಮನೆಯಲ್ಲಿ ಗಂಡನ ಕುಡಿತದ ಕಾರಣಕ್ಕೆ ಜಗಳ ಆಯ್ತು ಅಂತ ತನ್ನದೇ ಹೊಟ್ಟೆಯಲ್ಲಿ ಹುಟ್ಟಿದ ಆರು ಜನ ಮಕ್ಕಳನ್ನ ಬಾವಿಗೆ ದೂಡಿದ್ದಾಳೆ. ಈ ಘಟನೆ ಮುಂಬೈನ ಮಹದ್‌ ಎಂಬ ಹಳ್ಳಿಯಲ್ಲಿ ನಡಡೆದಿದೆ. ಹೀಗೆ ಮಕ್ಕಳನ್ನ ಬಾವಿಗೆ ದೂಡಿದ ಮಹಿಳೆಯನ್ನ ರುನಾ ಚಿಖುರಿ ಎಂದು ಗುರುತಿಸಲಾಗಿದೆ. ಇನ್ನುಈಕೆ ಕೂಡ ಬಾವಿಗೆ ಹಾರಿದ್ಳು ಆದ್ರೆ ಜನರು ನೋಡಿ ರಕ್ಷಿಸಿದ್ದಾರೆ. ಆದ್ರೆ ಅಷ್ಟರಲ್ಲಾಗಲೆ ಮಕ್ಕಳು ಮೃತಪಟ್ಟಿದ್ರು ಅಂತ ಗೊತ್ತಾಗಿದೆ. ಇನ್ನು ಮೃತಪಟ್ಟ ಮಕ್ಕಳಲ್ಲಿ 5 ಜನ ಹೆಣ್ಣು ಮಕ್ಕಳು ಅಂತ ತಿಳಿದು ಬಂದಿದೆ, ಇದೀಗ ತಾಯಿಯನ್ನ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply