ಕಳ್ಳ ಎಂದು ಟ್ರಕ್​​ಗೆ ಕಟ್ಟಿ ಎಳ್ಕೊಂಡು ಹೋದ್ರು: ವ್ಯಕ್ತಿ ಸಾವು

masthmagaa.com:

ಮಧ್ಯಪ್ರದೇಶದ ಭೋಪಾಲ್​ನಲ್ಲಿ ಅಮಾನವೀಯ ಘಟನೆಯೊಂದು ವರದಿಯಾಗಿದೆ. ಇಲ್ಲಿನ ನೀಮುಚ್ ಎಂಬಲ್ಲಿ ದುಷ್ಟರ ಗುಂಪೊಂದು 45 ವರ್ಷದ ವ್ಯಕ್ತಿಯನ್ನು ಕಳ್ಳ ಎಂದು ಆರೋಪಿಸಿ, ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ನಂತರ ಆನ ಎರಡೂ ಕಾಲುಗಳನ್ನು ಹಗ್ಗದಿಂದ ಕಟ್ಟಿ, ಹಗ್ಗದ ಮತ್ತೊಂದು ತುದಿಯನ್ನು ಗೂಡ್ಸ್ ವೆಹಿಕಲ್​​ಗೆ ಕಟ್ಟಿ ಎಳೆದುಕೊಂಡು ಹೋಗಿದ್ದಾರೆ. ನಂತರ ಪೊಲೀಸರಿಗೆ ಕರೆ ಮಾಡಿ, ಕಳ್ಳನನ್ನು ಹಿಡಿದಿದ್ದೀವಿ ಬೇಗ ಬನ್ನಿ ಅಂತ ಹೇಳಿದ್ಧಾರೆ. ಆದ್ರೆ ಪೊಲೀಸರು ಬರುವಷ್ಟರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆ ವ್ಯಕ್ತಿ, ಆಸ್ಪತ್ರೆಗೆ ಸೇರಿಸಿದ್ರೂ ಬದುಕಲಿಲ್ಲ. ಇದ್ರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದ್ದು, ಘಟನೆಗೆ ಕಾರಣವಾದ 8 ಮಂದಿ ಪೈಕಿ ಐವರನ್ನು ಅರೆಸ್ಟ್ ಮಾಡಲಾಗಿದೆ.

-masthmagaa.com

Contact Us for Advertisement

Leave a Reply