ನಾಗರಿಕರನ್ನು ಗುರಿಯಾಗಿಸಿ ರಷ್ಯಾ ದಾಳಿ: 7 ಮಂದಿ ಬಲಿ

masthmagaa.com:

ರಷ್ಯಾ ಸೇನೆ ಯುಕ್ರೇನ್ ರಾಜಧಾನಿ ಕಿಯೆವ್​​​ನತ್ತ ದಿನೇ ದಿನೇ ಹತ್ತಿರವಾಗ್ತಿದೆ. ಜೊತೆಗೆ ತನ್ನ ದಾಳಿಯ ತೀವ್ರತೆಯನ್ನು ಕೂಡ ಹೆಚ್ಚಿಸುತ್ತಿದೆ. ಕಿಯೆವ್​ನಲ್ಲಿ ಇವತ್ತು ಬೆಳಗ್ಗೆ ಕೂಡ ಏರ್ ರೈಡ್​​ನ ಸೈರನ್ ಕೇಳಿದೆ. ತೊರೆಯುತ್ತಿರೋ ಜನರನ್ನು ಗುರಿಯಾಗಿಸಿ ದಾಳಿ ನಡೆಸ್ತಿದ್ದು, ಅದ್ರಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 7 ಮಂದಿ ಪ್ರಾಣ ಕಳ್ಕೊಂಡಿದ್ದಾರೆ ಅಂತ ಯುಕ್ರೇನ್ ಆರೋಪಿಸಿದೆ. ಕಿಯೆವ್ ರೀತಿಯಲ್ಲೇ ಡೋನೆಟ್ಸ್ಕ್​​​​​ನಲ್ಲೂ ಸ್ಥಳಾಂತರ ಪ್ರಕ್ರಿಯೆ ವೇಳೆ ಜನರನ್ನು ಗುರಿಯಾಗಿಸಿ ದಾಳಿ ನಡೆಸಲಾಗ್ತಿದೆ ಅಂತ ಅಲ್ಲಿನ ಗವರ್ನರ್​​ಗಳು ಆರೋಪಿಸಿದ್ದಾರೆ. ಅಧ್ಯಕ್ಷರ ಸಲಹೆಗಾರ ಮೈಖೈಲೋ ಪೊಡೊಲ್ಯಾಕ್ ಪ್ರತಿಕ್ರಿಯಿಸಿ, ಕೀವ್​ ಕಂಪ್ಲೀಟಾಗಿ ನಮ್ಮ ನಿಯಂತ್ರಣದಲ್ಲಿದೆ. ಮುನ್ನುಗ್ಗುತ್ತಿರುವ ರಷ್ಯನ್ ಸೈನಿಕರನ್ನು ಎದುರಿಸಲು ನಮ್ಮ ಸೈನಿಕರು ಮತ್ತು ಸ್ವಯಂ ಸೇವಕರು ಪ್ರತಿಯೊಂದು ರಸ್ತೆಯಲ್ಲಿ ಬೀಡು ಬಿಟ್ಟಿದ್ದಾರೆ ಅಂತ ಮಾಹಿತಿ ನೀಡಿದ್ಧಾರೆ.

-masthmagaa.com

Contact Us for Advertisement

Leave a Reply