ಮುಂಬೈ: ಹೆಚ್ಚಾದ ದಡಾರ ಕೇಸ್‌ಗಳು, 1.2 ಲಕ್ಷ ಮಕ್ಕಳಿಗೆ ಲಸಿಕೆ!

masthmagaa.com:

ಮುಂಬೈನಲ್ಲಿ ಮೀಸಲ್ಸ್‌ ಅಥ್ವಾ ದಡಾರ ಕೇಸ್‌ಗಳು ಹೆಚ್ಚಾಗ್ತಿರೊ ಹಿನ್ನಲೆಯಲ್ಲಿ ಮಕ್ಕಳಿಗೆ ಲಸಿಕೆ ಹಾಕೋಕೆ ಮುಂಬೈ ಮಹಾನಗರ ಪಾಲಿಕೆ ಮುಂದಾಗಿದೆ. ದಡಾರ ಹೆಚ್ಚಿರೋ ಏರಿಯಾಗಳಲ್ಲಿ 6 ತಿಂಗಳಿನಿಂದ 5 ವರ್ಷದ ಒಳಗಿನ ಸುಮಾರು 1.2 ಲಕ್ಷ ಮಕ್ಕಳಿಗೆ ದಡಾರ ಮತ್ತು ರುಬೆಲ್ಲಾ ವ್ಯಾಕ್ಸಿನ್‌ ಹಾಕೋಕೆ ಪ್ಲಾನ್‌ ಮಾಡಿದೆ. 10% ಗಿಂತ ಜಾಸ್ತಿ ಕೇಸ್‌ಗಳು ಇರೋ ಏರಿಯಾದಲ್ಲಿ 6 ರಿಂದ 9 ತಿಂಗಳಿನ ಮಕ್ಕಳಿಗೆ ದಡಾರ ಮತ್ತು ರುಬೆಲ್ಲಾ ಹೊಂದಿರೋ MRCV ವ್ಯಾಕ್ಸಿನ್‌ ನೀಡೋಕೆ ಅಲ್ಲಿನ ಆರೋಗ್ಯ ಸಚಿವಾಲಯ ಶಿಫಾರಸು ಮಾಡಿದೆ. ಆದರೆ ಕೆಲವು ಕಡೆ 10% ಗಿಂತ ಕಡಿಮೆ ಕೇಸ್‌ಗಳಿವೆ. ಹಾಗಂತ ಮಕ್ಕಳಿಗೆ ವ್ಯಾಕ್ಸಿನ್‌ ಕೊಡದೇ ಇರೋಕೆ ಆಗಲ್ಲ. ಹಾಗಾಗಿ ಈ ಶಿಫಾರಸ್ಸನ್ನ ಇನ್ನೊಮ್ಮೆ ಪರೀಶೀಲನೆ ಮಾಡಿ ಅಂತ ಬಿಎಂಸಿ, ಆರೋಗ್ಯ ಸಚಿವಾಲಯಕ್ಕೆ ಸೂಚಿಸಿದೆ. ಅಂದ್ಹಾಗೆ ಇತ್ತೀಚೆಗೆ ಡಬ್ಲ್ಯೂಎಚ್‌ಒ ಕೂಡ ಜಾಗತಿಕವಾಗಿ ದಡಾರ ಕೇಸ್‌ಗಳು ಜಾಸ್ತಿಯಾಗೋ ಸಾಧ್ಯತೆ ಹೆಚ್ಚಿದೆ ಅಂತ ಎಚ್ಚರಿಸಿತ್ತು.

-masthmagaa.com

Contact Us for Advertisement

Leave a Reply