ತವರಿಗೆ ಹೋದ ಹೆಂಡತಿಯನ್ನ ಕರೆತರಲು ಕುಡುಕನ ಪ್ಲಾನ್

masthmagaa.com:

ಕುಡುಕರ ತಲೆ ಹೇಗೆಲ್ಲಾ ಕೆಲ್ಸ ಮಾಡುತ್ತೆ ಅನ್ನೋದಕ್ಕೆ ಇದೊಂಥರಾ ಎಕ್ಸಾಂಪಲ್.. ಮುಂಬೈನ ಮಲಾಡ್​ನ ವ್ಯಕ್ತಿಯೊಬ್ಬ ಡೈಲಿ ಕುಡ್ಕೊಂಡು ಬಂದು ಹೆಂಡ್ತಿಗೆ ಕಿರಿಕಿರಿಮಾಡ್ತಿದ್ದ. ಇದ್ರಿಂದ ಬೇಸೆತ್ತ ಹೆಂಡ್ತಿ ತವರು ಮನೆಗೆ ಹೋಗಿದ್ದಾರೆ. ಅರೆ ಹೋಗೇ ಬಿಟ್ಲಲ್ಲ ಅಂತ ಸಿಟ್ಟಗೆದ್ದ ಪತಿ.. 8 ವರ್ಷದ ಮಗ ಮತ್ತು 13 ವರ್ಷದ ಮಗಳು ಸತ್ತಿದ್ದಾರೆ ಎಂದು ಹೆದರಿಸಿ, ಪತ್ನಿಯನ್ನು ವಾಪಸ್ ಕರೆಸೋ ಪ್ಲಾನ್ ಮಾಡಿದ್ದಾನೆ. 8 ವರ್ಷದ ಮಗನನ್ನು ಬಿಳಿ ಬಟ್ಟೆಯಿಂದ ಸುತ್ತಿ ಅಂತ್ಯಸಂಸ್ಕಾರಕ್ಕೆ ರೆಡಿ ಮಾಡಿದಂತೆ ಮಾಡಿ ಫೋಟೋ ತೆಗೆದಿದ್ದಾನೆ. ಆಮೇಲೆ ಮಗಳನ್ನು ಬಕೆಟ್ ಮೇಲೆ ನಿಲ್ಲಿಸಿ, ಕುತ್ತಿಗೆಗೆ ಹಗ್ಗ ಕಟ್ಟಿ ಅದ್ರ ಮತ್ತೊಂದು ಬದಿ ಫ್ಯಾನ್​​ಗೆ ಕಟ್ಟಿದ್ದಾನೆ. ಈ ವೇಳೆ ಮಗಳು ಜೋರಾಗಿ ಅತ್ತಿದ್ದು ಕೇಳಿದ ಅಕ್ಕಪಕ್ಕದ ಮನೆಯವರು ಓಡಿ ಹೋಗಿ ರಕ್ಷಿಸಿದ್ದಾರೆ. ಪೊಲೀಸರು ಬಂದು ಎತ್ತಾಕ್ಕೊಂಡು ಹೋಗಿ ಕುಡಿದಿದ್ದೆಲ್ಲಾ ಇಳಿಸಿದ್ದಾರೆ. ನನ್ನ ಹೆಂಡ್ತಿಯನ್ನು ವಾಪಸ್ ಕರೆಸೋಕೆ ಹೀಗೆಲ್ಲಾ ಮಾಡ್ದೆ ಅಷ್ಟೆ ಅಂತ ಕುಡುಕ ಹೇಳಿಕೆ ಕೊಟ್ಟಿದ್ದಾನೆ.

-masthmagaa.com

Contact Us for Advertisement

Leave a Reply