ಮುಂಬೈನಲ್ಲಿ ಇವತ್ತು ಎಷ್ಟು ಮಂದಿಗೆ ಕೊರೋನಾ ಬಂದಿದೆ ಗೊತ್ತಾ?

masthmagaa.com:

ದೇಶದ ಕಮರ್ಷಿಯಲ್ ಕ್ಯಾಪಿಟಲ್​ ಅಂತ ಕರೆಯೋ ಮುಂಬೈನಲ್ಲೂ ಕೊರೋನಾ ದಾಖಲೆ ಬರೆದಿದೆ. ಇವತ್ತೊಂದೇ ದಿನ ಬರೋಬ್ಬರಿ ಎರಡೂವರೆ ಸಾವಿರ ಜನರಿಗೆ ಸೋಂಕು ದೃಢಪಟ್ಟಿದೆ. ನಿನ್ನೆಗಿಂತ 82 ಪರ್ಸೆಂಟ್​ ಹೆಚ್ಚು. ಇದು ಬರೀ ಮುಂಬೈದು, ಮಹಾರಾಷ್ಟ್ರದ್ದು ಇನ್ನೂ ಜಾಸ್ತಿದೆ. ಅಂದ್ಹಾಗೆ ವಾರದ ಹಿಂದೆ ಮುಂಬೈನ ಡೈಲಿ ಕೇಸಸ್​ 150 ಇತ್ತು. ಈಗ ಆಲ್ಮೋಸ್ಟ್ 15-20 ಪಟ್ಟು ಹೆಚ್ಚಾಗಿದೆ. ಮುಂಬೈನಲ್ಲಿ ಕೊರೋನಾ ಪಾಸಿಟಿವಿಟಿ ರೇಟ್​ ಕೂಡ ಹೆಚ್ಚಿದೆ ಸುಮಾರು 4 ಪರ್ಸೆಂಟ್​. ಅಂದ್ರೆ ನೂರು ಜನರಿಗೆ ಕೊರೋನಾ ಟೆಸ್ಟ್ ಮಾಡಿದ್ರೆ 4 ಜನರಿಗೆ ಪಾಸಿಟಿವ್ ಬರ್ತಿದೆ. ಚೆನ್ನೈನಲ್ಲೂ ಕೊರೋನಾ ಪ್ರಕರಣಗಳು ಹೆಚ್ಚಾಗ್ತಿವೆ ಅಂತ ತಮಿಳುನಾಡು ಆರೋಗ್ಯ ಸಚಿವರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply