ಹಿಜಬ್ ಗಲಾಟೆ ಬೆನ್ನಲ್ಲೇ ಪಾಕ್​ ಮಂದಿರಗಳ ಮೇಲೆ ದಾಳಿ!

masthmagaa.com:

ಭಾರತದಲ್ಲಿ ಹಿಜಬ್​ ಗಲಾಟೆ ನಡೀತಿದ್ದಂತೇ ಅತ್ತ ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನಗಳ ಮೇಲಿನ ದಾಳಿ ಮುಂದುವರಿದಿದೆ. ಇದೀಗ ಸಿಂದ್​ ಪ್ರಾಂತ್ಯದ ಸುಕ್ಕುರ್ ಜಿಲ್ಲೆಯ ರೋಹ್ರಿ ನಗರ ಸಮೀಪ ಐತಿಹಾಸಿಕ ಶೆರಾವಲಿ ಮಟ ದೇವಸ್ಥಾನದ ಮೇಲೆ ದಾಳಿ ನಡೆದಿದೆ. ದಾಳಿಕೋರರು ದೇವಸ್ಥಾನದಲ್ಲಿದ್ದ ಐದು ದೇವರ ಮೂರ್ತಿಗಳನ್ನ ಧ್ವಂಸ ಮಾಡಿದ್ದಾರೆ. ಜೊತೆಗೆ ದೇವಸ್ಥಾನದಲ್ಲಿದ್ದ ನಗದು, ಚಿನ್ನದ ಕಿರೀಟ, ಆಭರಣ ಮತ್ತು ಭಕ್ತರ ಮೂರು ಬೈಕ್​ಗಳನ್ನ ದೋಚಿ ಪರಾರಿಯಾಗಿದ್ದಾರೆ ಅಂತ All Pakistan Hindu Panchayat ಹೇಳಿದೆ.

-masthmagaa.com

Contact Us for Advertisement

Leave a Reply