ಮುಸ್ಲಿಂ ಬಾಲಕ ಟೋಪಿ ಧರಿಸಿದ್ದಕ್ಕೆ ನಡೀತು ಮಾರಾಮಾರಿ!

masthmagaa.com:

ಮುಸ್ಲಿಂ ಬಾಲಕನೊಬ್ಬ ಟೋಪಿ ಧರಿಸಿದ್ದಕ್ಕೆ ಸಂಬಂಧಿಸಿದಂತೆ ಬಾಗಲಕೋಟೆಯ ಇಳಕಲ್​​ನಲ್ಲಿ ಎರಡು ಕೋಮಿನ ನಡುವೆ ಮಾರಾಮಾರಿ ನಡೆದಿದೆ. ಟ್ಯೂಷನ್​ ಕ್ಲಾಸ್​​ಗೆ ಟೋಪಿ ಧರಿಸಿ ಬಂದಿದ್ದ ಬಾಲಕನಿಗೆ ಕೆಲವರು ಕಿಚಾಯಿಸಿದ್ದಾರೆ. ಈ ವಿಚಾರಕ್ಕೆ ಎರಡೂ ಕಡೆಯವರು ಹೊಡೆದಾಡಿಕೊಂಡಿದ್ದಾರೆ. ಹೊಡೆದಾಟದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಎರಡೂ ಕಡೆಯವರು ದೂರು ದಾಖಲಿಸಿದ್ದಾರೆ ಅಂತ ಪೊಲೀಸರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply