‘ನನ್ನಮ್ಮ ನಮ್ಮಪ್ಪನಿಗಿಂತ ಹೆಚ್ಚು ಸಂಪಾದನೆ ಮಾಡ್ತಿದ್ರು’ : ಸತ್ಯ ಬಿಚ್ಚಿಟ್ಟ ಪ್ರಿಯಾಂಕ ಚೋಪ್ರ!

masthmagaa.com:

ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಪುರುಷ ಮತ್ತು ಮಹಿಳೆಯರ ನಡುವಿನ ವೇತನ ವ್ಯತ್ಯಾಸದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಜೀವನದ ಒಂದು ಉದಾಹರಣೆಯನ್ನ ಕೊಟ್ಟಿದ್ದಾರೆ. ತಾಯಿ ಮಧು ಚೋಪ್ರಾ, ದಿವಂಗತ ತಂದೆ ಅಶೋಕ್ ಚೋಪ್ರಾಗಿಂತ ಹೆಚ್ಚು ಸಂಪಾದಿಸುತ್ತಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಸಂದರ್ಶನವೊದರಲ್ಲಿ ಮಾತನಾಡಿದ ಪ್ರಿಯಾಂಕಾ ಚೋಪ್ರಾ,

” ನನ್ನ ತಾಯಿ ನನ್ನ ತಂದೆಗಿಂತ ಹೆಚ್ಚು ಹಣ ಸಂಪಾದನೆ ಮಾಡ್ತಿದ್ರು. ತಾನು ಹೆಚ್ಚುಸಂಪಾದನೆ ಮಾಡ್ತೀನಿ ಅನ್ನೋ ಅಹಂಕಾರ ಯಾವತ್ತೂ ನನ್ನ ತಾಯಿಗೆ ಇರಲಿಲ್ಲ. ಅಥ್ವಾ ನನ್ನ ತಂದೆ ತಾಯಿ ಮಧ್ಯೆ ಸಂಪಾದನೆ ವಿಷಯಕ್ಕೆ ಯಾವತ್ತೂ ಜಗಳ ಆಗಿರಲಿಲ್ಲ. ಜೀವನದಲ್ಲಿ ಕೆಲವು ಪುರುಷರು ಅವರ ಯಶಸ್ಸಿನ ಬಗ್ಗೆ ಯೋಚಿಸ್ತಾರೆ. ಅಥ್ವಾ ನನ್ನ ಪತ್ನಿ ನನಗಿಂತ ಜಾಸ್ತಿ ಸಂಪಾದನೆ ಮಾಡ್ತಾಳೆ ಅಂತ ಇನ್‌ಸೆಕ್ಯೂರ್‌ ಫೀಲ್‌ ಮಾಡ್ಕೋಳ್ತಾರೆ. ಆದರೆ ನನ್ನ ಪ್ರಕಾರ ಪುರುಷರು ಇದರ ಬಗ್ಗೆ ಇನ್‌ಸೆಕ್ಯೂರ್‌ ಫೀಲ್‌ ಮಾಡ್ಕೋಳೊ ಅವಶ್ಯಕತೆ ಇಲ್ಲ ಅಂತ ಅನ್ಸತ್ತೆ”ಎಂದು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply