2020ರ ಚುನಾವಣೆಯನ್ನೆ ರದ್ದು ಮಾಡಿದ ಮಯನ್ಮಾರ್‌ ಮಿಲಿಟರಿ ಸರ್ಕಾರ

masthmagaa.com:

ಮಯನ್ಮಾರ್​​ ಮಿಲಿಟರಿ ಸರ್ಕಾರ 2020ರಲ್ಲಿ ನಡೆದಿದ್ದ ಚುನಾವಣೆಯನ್ನೇ ರದ್ದುಪಡಿಸಿದೆ. ಈ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಪರ ನಾಯಕಿ ಆಂಗ್ ಸನ್ ಸು ಕ್ಯೀ ಜಯಗಳಿಸಿದ್ರು. ಇದೇ ವರ್ಷದ ಫೆಬ್ರವರಿಯಲ್ಲಿ ಅಧಿಕಾರ ವಶಕ್ಕೆ ಪಡೆದ ಮಿಲಿಟರಿ, ಆಂಗ್ ಸನ್​ ಸು ಕ್ಯೀ ಅವರನ್ನು ಅರೆಸ್ಟ್ ಮಾಡಿ, ಹಲವು ಕೇಸ್ ಹಾಕಿ, ಒಳಗಿಟ್ಟಿದೆ. ಇದೀಗ ಕ್ರಾಂತಿಯ 6 ತಿಂಗಳ ಬಳಿಕ 2020ರ ಚುನಾವಣೆ ರದ್ದು ಮಾಡಿದೆ. ಆ ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತವಾಗಿರಲಿಲ್ಲ. ಚನಾವಣೆಯಲ್ಲಿ ಫ್ರಾಡ್ ಆಗಿರೋ ಬಗ್ಗೆ 1.1 ಕೋಟಿ ಕೇಸ್​ಗಳು ದಾಖಲಾಗಿರೋದು ತನಿಖೆಯಲ್ಲಿ ಗೊತ್ತಾಗಿದೆ ಅಂತ ಮಿಲಿಟರಿ ಬೆಂಬಲಿತ ಚುನಾವಣಾ ಆಯೋಗ ಘೋಷಿಸಿದೆ. ಅಲ್ಲದೆ ಆಂಗ್ ಸನ್ ಸು ಕ್ಯೀ ಅವರ ನ್ಯಾಷನಲ್ ಲೀಗ್ ಫರ್ ಡೆಮೋಕ್ರಸಿ, ಅಧಿಕಾರವನ್ನ ಪಡೆದುಕೊಳ್ಳಲು ಕೊರೋನಾ ನಿರ್ಬಂಧಗಳನ್ನು ಕೂಡ ದುರ್ಬಳಕೆ ಮಾಡ್ಕೊಂಡಿತ್ತು. ಹೀಗಾಗಿ ನಾವು ಚುನಾವಣೆಯನ್ನೇ ರದ್ದು ಮಾಡ್ತಿದ್ದೀವಿ ಅಂತ ಘೋಷಿಸಿದೆ. ಆದ್ರೆ 5.4 ಕೋಟಿ ಜನಸಂಖ್ಯೆ ಇರೋ ಈ ದೇಶದಲ್ಲಿ ಮುಂದಿನ ಚುನಾವಣೆ ಯಾವಾಗ ಅಂತ ಮಾತ್ರ ಆಯೋಗ ಘೋಷಣೆ ಮಾಡಿಲ್ಲ.

-masthmagaa.com

Contact Us for Advertisement

Leave a Reply