1 ನಿಮಿಷದಲ್ಲಿ 6 ಇಡ್ಲಿ ತಿಂದ ವೃದ್ಧೆ..!

ಮೈಸೂರು: 60 ವರ್ಷದ ವೃದ್ಧೆಯೊಬ್ಬರು ದಸರಾ ಅಂಗವಾಗಿ ನಡೆದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಜಯಗಳಿಸಿದ್ದಾರೆ. ವಿಶೇಷವಾಗಿ ಮಹಿಳೆಯರಿಗಾಗಿಯೇ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಹಲವರು ಭಾಗಿಯಾಗಿದ್ದರು. ಉದ್ದವಾದ ಟೇಬಲ್ ಮೇಲೆ ಇಡ್ಲಿ, ಸಾಂಬಾರ್ ವ್ಯವಸ್ಥೆ ಮಾಡಲಾಗಿತ್ತು. ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಸರೋಜಮ್ಮ ಎಂಬುವವರು ಒಂದೇ ನಿಮಿಷದಲ್ಲಿ 6 ಇಡ್ಲಿ ತಿಂದು, ಸ್ಪರ್ಧೆಯಲ್ಲಿ ಗೆದ್ದಿದ್ದಾರೆ. 10 ದಿನಗಳ ಈ ದಸರಾ ಸಂಭ್ರಮ ಸೆಪ್ಟೆಂಬರ್ 29ರಂದು ಆರಂಭವಾಗಿದ್ದು, ಅಕ್ಟೋಬರ್ 8ರಂದು ಜಂಬೂ ಸವಾರಿ ಮೂಲಕ ಅಂತ್ಯವಾಗಲಿದೆ.

Contact Us for Advertisement

Leave a Reply