ದ.ಕೊರಿಯಾ ಗಡಿಯಲ್ಲಿ ಆರ್ಟಿಲ್ಲರಿ ಹಾರಿಸಿದ ಉತ್ತರ ಕೊರಿಯಾ!

masthmagaa.com:

ಇತ್ತೀಚಿಗಷ್ಟೇ ದಕ್ಷಿಣ ಕೊರಿಯಾ ತನ್ನ ವಾರ್ಷಿಕ ಸೇನಾಭ್ಯಾಸವನ್ನ ಶುರು ಮಾಡಿದೆ. ಇದರ ಬೆನ್ನಲ್ಲೇ ಉತ್ತರ ಕೊರಿಯಾ, ದಕ್ಷಿಣ ಕೊರಿಯಾದ ಗಡಿಯಲ್ಲಿ ಆರ್ಟಿಲ್ಲರಿಗಳನ್ನ ಹಾರಿಸಿ ಮತ್ತೆ ಟೆನ್ಶನ್‌ ಕ್ರಿಯೆಟ್‌ ಮಾಡಿದೆ. 2018ರಲ್ಲಿ ಸೆಟ್‌ ಮಾಡಿರೊ ಜಲಗಡಿಯ ಬಫರ್‌ ಜೋನ್‌ನಲ್ಲಿ ಆರ್ಟಿಲ್ಲರಿ ಶೆಲ್‌ ದಾಳಿ ಮಾಡಿದ, ಒಪ್ಪಂದವನ್ನ ಉಲ್ಲಂಘಿಸಿದೆ ಅಂತ ದಕ್ಷಿಣ ಕೊರಿಯಾ ಆರೋಪಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರೊ ಉತ್ತರ ಕೊರಿಯಾ, ಈ ನಡೆ ನಮ್ಮ ವಿರುದ್ದ ಶತ್ರು ಮಾಡ್ತಿರೊ ಸೇನಾಭ್ಯಾಸದ ಪ್ರತಿದಾಳಿ ಅಂತ ಹೇಳಿಕೊಂಡಿದೆ. ಅಂದ್ಹಾಗೆ ಉತ್ತರ ಕೊರಿಯಾದ ಪರಮಾಣು ಹಾಗೂ ಕ್ಷಿಪಣಿ ಬೆದರಿಕೆ ವಿರುದ್ದ ತನ್ನ ಸಾಮರ್ಥ್ಯ ಹೆಚ್ಚಿಸೋ ಉದ್ದೇಶದಿಂದ ಸೇನಾಭ್ಯಾಸ ಮಾಡ್ತಿರೋದಾಗಿ ದಕ್ಷಿಣ ಕೊರಿಯಾ ಹೇಳಿತ್ತು.

-masthmagaa.com

Contact Us for Advertisement

Leave a Reply