ಹಜ್ಮತ್ ಸೂಟ್ ಧರಿಸಿ ಉತ್ತರ ಕೊರಿಯಾ ಯೋಧರ ಪರೇಡ್!

masthmagaa.com:

ಉತ್ತರ ಕೊರಿಯಾಗೆ ಇವತ್ತು 73ನೇ ನ್ಯಾಷನಲ್ ಫೌಂಡೇಷನ್ ದಿನ. ಇದ್ರ ಅಂಗವಾಗಿ ಮಧ್ಯರಾತ್ರಿಯೇ ರಾಜಧಾನಿ ಪಂಗಾಂಗ್​​ನ ಕಿಮ್ ಇಲ್ ಸಂಗ್ ಸ್ಕ್ವೇರ್​ನಲ್ಲಿ ಮಿಲಿಟರಿ ಪರೇಡ್ ನಡೆಸಲಾಗಿದೆ. ಈ ಸ್ಕ್ವೇರ್​​ನ ಮೇಲ್ಭಾಗದಲ್ಲಿ ಯುದ್ಧ ವಿಮಾನಗಳು ಕೂಡ ಹಾರಾಟ ನಡೆಸಿವೆ. ಇದ್ರಲ್ಲಿ ಸಾವಿರಾರು ಯೋಧರು ಕೇಸರಿ ಬಣ್ಣದ ಹಜ್ಮತ್ ಸೂಟ್ ಧರಿಸಿಕೊಂಡು ಪರೇಡ್ ನಡೆಸಿದ್ರು. ಸಾಮಾನ್ಯವಾಗಿ ಉತ್ತರ ಕೊರಿಯಾದಲ್ಲಿ ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಕಂಡು ಹಿಡಿದಾಗ, ಅದನ್ನು ಪ್ರದರ್ಶಿಸಲು ಈ ರೀತಿ ರಾತ್ರಿ ಮಿಲಿಟರಿ ಪರೇಡ್​​ಗಳನ್ನು ನಡೆಸಲಾಗುತ್ತೆ. ಆದ್ರೆ ಈ ಬಾರಿ ಮಿಲಿಟರಿ ಪರೇಡ್​​ನಲ್ಲಿ ಶಸ್ತ್ರಾಸ್ತ್ರಗಳ ಪ್ರದರ್ಶನ ನಡೆದ್ರೂ ಖಂಡಾಂತರ ಕ್ಷಿಪಣಿಗಳ ಪ್ರದರ್ಶನ ಇರಲಿಲ್ಲ. ಈ ಕಾರ್ಯಕ್ರಮದಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೂಡ ಭಾಗಿಯಾಗಿದ್ರು. ಕ್ರೀಂ ಬಣ್ಣದ ಸೂಟು ಧರಿಸಿ ಪಳ ಪಳ ಹೊಳೆಯುತ್ತಿದ್ದ ಕಿಮ್​​, ಬಾಲ್ಕನಿಯಲ್ಲಿ ನಿಂತುಕೊಂಡು ಪರೇಡ್ ನಡೆಸುತ್ತಿರುವ ಯೋಧರು ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾದ ಜನರ ಕಡೆಗೆ ಕೈ ಬೀಸುತ್ತಿರೋ ಫೋಟೋಗಳು ಲಭ್ಯವಾಗಿದೆ. ಆದ್ರೆ ಕಾರ್ಯಕ್ರಮದಲ್ಲಿ ಕಿಮ್ ಜಾಂಗ್ ಉನ್ ಭಾಷಣ ಮಾಡಿರೋ ಬಗ್ಗೆ ವರದಿಯಾಗಿಲ್ಲ.

-masthmagaa.com

Contact Us for Advertisement

Leave a Reply