ಹೆಂಡ್ತಿ ಜೊತೆ ಕಾಣಿಸಿಕೊಂಡ ಕಿಮ್ ಜಾಂಗ್ ಉನ್!

masthmagaa.com:

ಹೊಸ ವರ್ಷ ಬಂದಾಗಿನಿಂದ ಒಂದಾದ್ಮೇಲೆ ಒಂದು ಕ್ಷಿಪಣಿ ಪರೀಕ್ಷೆ ನಡೆಸಿದ್ದ ಉತ್ತರ ಕೊರಿಯಾದಲ್ಲೀಗ 2021ರ ಸಾಧನೆಯನ್ನು ತಿಳಿಸುವ ಒಂದು ಡಾಕ್ಯುಮೆಂಟರಿ ಬಿಡುಗಡೆ ಮಾಡಲಾಗಿದೆ. ದಿ ಗ್ರೇಟ್ ಇಯರ್ ಆಫ್ ವಿಕ್ಟರಿ 2021 ಅನ್ನೋ ಈ 110 ನಿಮಿಷಗಳ ಡಾಕ್ಯುಮೆಂಟರಿಯಲ್ಲಿ ಕ್ಷಿಪಣಿ ಅಭಿವೃದ್ಧಿ, ನಿರ್ಮಾಣ ಕಾರ್ಯ ಮತ್ತು ಕೊರೋನಾ ವಿರುದ್ಧ ಹೋರಾಟದ ವಿಚಾರವಾಗಿ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದೆ. ಇದ್ರಲ್ಲಿ ಕಿಮ್ ನೇತೃತ್ವದಲ್ಲಿ ಆಗಿರೋ ವಿಕ್ಟರಿ ಯೋಜನೆಗಳನ್ನು ಪದೇ ಪದೇ ಹಾಡಿ ಹೊಗಳಲಾಗಿದೆ. ಉತ್ತರ ಕೊರಿಯಾ ಬರ, ಪ್ರವಾಹ, ನಿರ್ಬಂಧಗಳಿಂದ ಆಹಾರದ ಕೊರತೆಯನ್ನು ಎದುರಿಸುತ್ತಿದೆ ಅಂತ ವಿಶ್ವಸಂಸ್ಥೆಯ ಏಜೆನ್ಸಿಗಳು ಹೇಳುತ್ತಲೇ ಇವೆ. ಆದ್ರೆ ದೇಶದ ಜನತೆಯ ಸಂಕಷ್ಟದ ಬಗ್ಗೆ ಈ ಡಾಕ್ಯುಮೆಂಟರಿಯಲ್ಲಿ ಯಾವುದೇ ಉಲ್ಲೇಖ ಮಾಡಿಲ್ಲ. ಈ ಡಾಕ್ಯುಮೆಂಟರಿಯಲ್ಲಿ ಕಿಮ್ ಜಾಂಗ್ ಉನ್​ರನ್ನು ವಿವಿಧ ಅವತಾರದಲ್ಲಿ ತೋರಿಸಲಾಗಿದೆ. ಗುಂಪು ಕಟ್ಕೊಂಡು ಕುದುರೆ ಓಡಿಸ್ತಿರೋದು, ಕುದುರೆ ಮೇಲೆ ಕೂತ್ಕೊಂಡು ಸನ್ ರೈಸ್ ನೋಡ್ತಿರೋದು, ಮಳೆಯಿಂದ ಹಾನಿಗೊಳಗಾದ ಪ್ರದೇಶದಲ್ಲಿ ನಿರ್ಮಾಣ ಕಾರ್ಯ ನಡೀತಿರೋ ಸ್ಥಳಕ್ಕೆ ಭೇಟಿ ನೀಡ್ತಿರೋದು, ಪಕ್ಷದ ನಾಯಕರನ್ನು ಉದ್ದೇಶಿಸಿ ಮಾತನಾಡ್ತಿರೋದು, ಮಿಲಿಟರಿ ಅಧಿಕಾರಿಗಳ ಜೊತೆ ಕೂತಿರೋದು, ಯುದ್ಧ ಟ್ಯಾಂಕರ್​​ಗಳ ಡ್ರಿಲ್​​ನ್ನು ಕೂಡ ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಆದ್ರೆ ಮಳೆ ಪೀಡಿತ ಸ್ಥಳಕ್ಕೆ ಹೋಗುವಾಗ ಕಿಮ್ ಜಾಂಗ್ ಉನ್ ಕಷ್ಟ ಪಡೋದನ್ನು ಕೂಡ ತೋರಿಸಲಾಗಿದೆ. ಜೊತೆಗೆ ವಿಡಿಯೋದಲ್ಲಿ ಜನ ಕನಸುಗಳನ್ನು ನನಸಾಗಿಸಲು ಕಿಮ್ ಜಾಂಗ್ ಉನ್ ತಮ್ಮ ಸಂಪೂರ್ಣ ದೇಹವನ್ನೇ ಅರ್ಪಿಸಿದ್ದಾರೆ ಅಂತ ಡಾಕ್ಯುಮೆಂಟರಿಯಲ್ಲಿ ಹೇಳಲಾಗಿದೆ. ಆದ್ರೆ ಈ ವಿಡಿಯೋದಲ್ಲಿ ಕಿಮ್ ಜಾಂಗ್ ಉನ್ ವೇಯ್ಟ್ ಲಾಸ್ ಬಗ್ಗೆ ಏನೂ ಹೇಳಿಲ್ಲ. ಆದ್ರೆ ಈ ವಿಡಿಯೋದಲ್ಲಿ ಕಿಮ್ ತೆಳ್ಳಗಾಗಿರೋದು ಸ್ಪಷ್ಟವಾಗಿ ಗೊತ್ತಾಗುತ್ತೆ.

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಅವರ ಪತ್ನಿ ರಿ ಸೋಲ್‌ ಜೂ 5 ತಿಂಗಳ ನಂತರ ಹೊರ ಜಗತ್ತಿಗೆ ಕಾಣಿಸಿಕೊಂಡಿದ್ದಾರೆ..ರಾಜಧಾನಿ ಪ್ಯಾಂಗಾಗ್​​​​ನಲ್ಲಿರೋ ಮಾನ್ಸುಡೆ ಕಲಾ ಮಂದಿರದಲ್ಲಿ ಬುಧವಾರ ನಡೆಯುತ್ತಿದ್ದ ಹೊಸ ವರ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆಂದು ಅಂತ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಕೊರೋನಾ ಹಾವಳಿ ಶುರುವಾದ್ಮೇಲೆ ಕಿಮ್‌ ಫ್ಯಾಮಿಲಿ ಹೊರಗಡೆ ಎಲ್ಲೂ ಹೆಚ್ಚಾಗಿ ಕಾಣಿಸ್ಕೊಂಡಿರ್ಲಿಲ್ಲ. ಕೊನೇ ಬಾರಿ ಅವರು 2021ರ ಅಕ್ಟೋಬರ್‌ 9ರಂದು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ರು. ಈ ಸಲ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಿಮ್‌ ಪತ್ನಿ ನೋಡಿ ನೆರೆದಿದ್ದ ಜನರು ಸ್ವಾಗತಿಸಿ ಘೋಷಣೆ ಕೂಗಿದ್ದಾರೆ. ಇತ್ತ ಕಿಮ್‌ ದಂಪತಿ ಕೂಡ ಸ್ಟೇಜ್‌ ಮೇಲಿಂದ ಜನರತ್ತ ಕೈ ಬೀಸಿದ್ರು. ಬಳಿಕ ಕಾರ್ಯಕ್ರಮ ಮುಗಿಸಿ ಹೊರಡುವಾಗ ಅಲ್ಲಿನ ಕಲಾವಿದರ ಜೊತೆ ಹ್ಯಾಂಡ್‌ ಶೇಕ್‌ ಮಾಡಿ ಫೋಟೋಗೂ ಕೂಡ ಪೋಸ್‌ ಕೊಟ್ಟಿದ್ದಾರೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply