ಪಂಜಾಬ್ ಆಪ್ ಸಚಿವರ ಬಗ್ಗೆ ಕೇಳಿದ್ರೆ ತಲೆ ತಿರುಗುತ್ತೆ!

masthmagaa.com:

ಪಂಜಾಬ್‌ನ ನೂತನ ಸಂಪುಟದ 11 ಸಚಿವರಲ್ಲಿ 7 ಜನರ ಮೇಲೆ ಕ್ರಿಮಿನಲ್‌ ಪ್ರಕರಣಗಳಿವೆ ಅಂತ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಎಂಬ ಸಂಸ್ಥೆ ಹೇಳಿದೆ. ಈ ಸಂಸ್ಥೆ ಹನ್ನೊಂದು ಸಚಿವರ ಅಫಿಡವಿಟ್‌ನ್ನು ಪರಿಶೀಲಿಸಿದ್ದು, ಅದ್ರಲ್ಲಿ 7 ಸಚಿವರು ತಮ್ಮ ವಿರುದ್ಧ ಕ್ರಿಮಿನಲ್‌ ಪ್ರಕರಣಗಳಿರೋದಾಗಿ ಘೋಷಿಸಿಕೊಂಡಿದ್ದಾರೆ. ಅದ್ರಲ್ಲೂ ನಾಲ್ವರ ಮೇಲೆ ಗಂಭೀರ ಪ್ರಕರಣಗಳಿರೋದಾಗಿ ಹೇಳ್ಕೊಂಡಿದ್ದಾರೆ. ಜೊತೆಗೆ 11 ರಲ್ಲಿ ಒಂಬತ್ತು ಜನರು ತಮ್ಮ ಆಸ್ತಿ ಒಂದು ಕೋಟಿಗಿಂತ ಜಾಸ್ತಿ ಇರೋದಾಗಿ ಘೋಷಿಸಿಕೊಂಡಿದ್ದಾರೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply