ಮಿಸ್‌ ಇಂಡಿಯಾ 2023 ಕಿರೀಟ ಜಯಿಸಿದ ನಂದಿನಿ ಗುಪ್ತಾ !

masthmagaa.com:

ರಾಜಸ್ಥಾನದ ನಂದಿನಿ ಗುಪ್ತಾ ಫೆಮಿನಾ ಮಿಸ್‌ ಇಂಡಿಯಾ 2023 ಆಗಿ ಹೊರಹೊಮ್ಮಿದ್ದಾರೆ. ಏಪ್ರಿಲ್‌ 15 ರಂದು ಮಣಿಪುರನ ಇಂಫಾಲ್‌ನ ಖುಮಾನ್ ಲ್ಯಾಂಪಕ್‌ನಲ್ಲಿ 59 ನೇ ಮಿಸ್‌ ಇಂಡಿಯಾ ಸ್ಪರ್ಧೆ ಜರುಗಿತು. ಈ ಸಮಾರಂಭದಲ್ಲಿ ನಂದಿನಿ ಗುಪ್ತಾಗೆ ಮಿಸ್‌ ಇಂಡಿಯಾ 2023 ಕಿರೀಟ ಕೊಟ್ಟು ಸನ್ಮಾನಿಸಲಾಯಿತು.
19 ವರ್ಷದ ನಂದಿನಿ 10 ನೇ ವಯಸ್ಸಿನಿಂದಲೇ ಮಿಸ್‌ ಇಂಡಿಯಾ ಆಗಬೇಕೆಂದು ಕನಸು ಕಂಡಿದ್ದರು. ನಂದಿನಿ ಸೇಂಟ್ ಪಾಲ್ಸ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಪದವಿಪೂರ್ವ ಶಿಕ್ಷಣವನ್ನ ಪಡೆದಿದ್ದು, ಸದ್ಯ ಲಾಲಾ ಲಜಪತ್ ರಾಯ್ ಕಾಲೇಜಿನಲ್ಲಿ ಬಿಸಿನೆಸ್‌ ಮ್ಯಾನೇಜ್‌ಮೆಂಟ್‌ ಓದುತ್ತಿದ್ದಾರೆ.

ಮಿಸ್‌ ಇಂಡಿಯಾ ಸಂದರ್ಶನದಲ್ಲಿ ನಂದಿನಿ ಗುಪ್ತಾಗೆ ನಿಮ್ಮ ಜೀವನದ ಪ್ರಭಾವಿ ವ್ಯಕ್ತಿ ಯಾರು ಎಂದು ಪ್ರಶ್ನಿಸಲಾಯಿತು. ಅದಕ್ಕೆ ಅವರು ರತನ್‌ ಟಾಟಾ ಹೆಸರು ಹೇಳಿದ್ದಾರೆ. ʻʻರತನ್‌ ಟಾಟಾ ತುಂಬಾ ಒಳ್ಳೆಯ ವ್ಯಕ್ತಿ, ತಾವು ಸಂಪಾದನೆ ಮಾಡಿದರಲ್ಲಿ ಬಹುತೇಕ ಭಾಗವನ್ನ ದಾನ ಮಾಡುತ್ತಾರೆ. ಅಸಂಖ್ಯಾತ ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ನನಗೆ ಪ್ರಭಾವ ಬಿರಿದ ಮತ್ತೊಬ್ಬರು 2000ಸಾಲಿನ ಮಿಸ್‌ ವರ್ಲ್ಡ್‌ ಪ್ರಿಯಾಂಕಾ ಚೋಪ್ರಾ. ಅವರೇ ನನಗೆ ಸ್ಪೂರ್ತಿʼʼ ಎಂದು ನಂದಿನಿ ಗುಪ್ತಾ ಹೇಳಿದರು.

ಫೆಮಿನಾ ಮಿಸ್‌ ಇಂಡಿಯಾ 2023 ಕಾರ್ಯಕ್ರಮವನ್ನ ಭೂಮಿ ಪೆಡ್ನೇಕರ್ ಮತ್ತು ಮನೀಶ್ ಪಾಲ್ ಅಚ್ಚುಕಟ್ಟಾಗಿ ನಿರ್ವಹಿಸಿದರು. ಅನನ್ಯ ಪಾಂಡೆ ಮತ್ತು ಕಾರ್ತಿಕ್ ಆರ್ಯನ್ ಚೆನ್ನಾಗಿ ಕುಣಿದರು. ಫೆಮಿನಾ ಮಿಸ್ ಇಂಡಿಯಾ ಯೂನಿವರ್ಸ್ 2002 ನೇಹಾ ಧೂಪಿಯಾ, ಬಾಕ್ಸಿಂಗ್ ಐಕಾನ್ ಲೈಶ್ರಾಮ್ ಸರಿತಾ ದೇವಿ, ಏಸ್ ನೃತ್ಯ ಸಂಯೋಜಕ ಟೆರೆನ್ಸ್ ಲೂಯಿಸ್, ನಿರ್ದೇಶಕ ಹರ್ಷವರ್ಧನ್ ಕುಲಕರ್ಣಿ ಮತ್ತು ನಮ್ರತಾ ಜೋಶಿಪುರಾ ಸ್ಪರ್ದೆಯ ತೀರ್ಪುಗಾರರಾಗಿದ್ದರು.

-masthmagaa.com

Contact Us for Advertisement

Leave a Reply