ಜಮ್ಮು ಕಾಶ್ಮೀರದಲ್ಲಿ ಮೋದಿ: ಅಪ್​ಡೇಟ್ಸ್ ಇಲ್ಲಿದೆ

masthmagaa.com:

2019ರ ಆಗಸ್ಟ್​ 5ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಆರ್ಟಿಕಲ್‌ 370 ರದ್ದಾದ ಮೇಲೆ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಜಮ್ಮು ಕಾಶ್ಮೀರ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ 20 ಸಾವಿರ ಕೋಟಿಗೂ ಅಧಿಕ ಮೊತ್ತದ ಮೂಲಭೂತ ಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಎರಡು ಹೈಡ್ರೋ ಎಲೆಕ್ಟ್ರಿಕ್ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಒಂದು 850 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಘಟಕವನ್ನು ಕಿಷ್ಟ್​ವರ್​​ನ ಚೆನಾಬ್ ನದಿ ತೀರದಲ್ಲಿ 5300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗ್ತಿದೆ. ಅದೇ ರೀತಿ 540 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಘಟಕವನ್ನು ಅದೇ ನದಿ ತೀರದಲ್ಲಿ 4500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗ್ತಿದೆ. ಇದನ್ನು ಹೊರತುಪಡಿಸಿ ಬನಿಹಾಲ್ ಮತ್ತು ಖಾಜಿಗುಂದ್​ ಸುರಂಗವನ್ನು ಕೂಡ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ಧಾರೆ. 3100 ಕೋಟಿ ರೂಪಾಯಿ ಮೊತ್ತದ ಯೋಜನೆ ಇದಾಗಿದ್ದು, 8.45 ಕಿಲೋಮೀಟರ್ ಉದ್ದವಿದ್ದು, ಈ ಸುರಂಗದಿಂದ ಎರಡು ಸ್ಥಳಗಳ ನಡುವಿನ ಪ್ರಯಾಣದ ಅವಧಿ ಒಂದೂವರೆ ಗಂಟೆಯಷ್ಟು ಕಡಿಮೆಯಾಗಲಿದೆ. ರಾಷ್ಟ್ರೀಯ ಪಂಚಾಯತ್ ರಾಜ್ ದಿನವಾಗಿದ್ದರಿಂದ ಜಮ್ಮುವಿನ ಪಲ್ಲಿ ಗ್ರಾಮದಿಂದಲೇ ದೇಶದ ಎಲ್ಲಾ ಗ್ರಾಮಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ರು. ಪಲ್ಲಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗಿಯಾಗಿದ್ರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಈ ಜಾಗ ನನಗೆ ಹೊಸತಲ್ಲ.. ಈ ಜಾಗಕ್ಕೂ ನಾನು ಹೊಸಬನಲ್ಲ. ಕಳೆದ 6 ದಶಕಗಳಲ್ಲಿ ಈ ಭಾಗದಲ್ಲಿ ಕೇವಲ 17 ಸಾವಿರ ಕೋಟಿ ಖರ್ಚು ಮಾಡಲಾಗಿತ್ತು. ಆದ್ರೆ ಕಳೆದೆರಡು ವರ್ಷಗಳಲ್ಲಿ 38 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಅಂದ್ರು. ಜೊತೆಗೆ ಯುವಕರನ್ನು ಉದ್ದೇಶಿಸಿ ಮಾತಾಡಿದ ಅವರು, ನಿಮ್ಮ ಪೂರ್ವಜರು ಸಂಕಷ್ಟದಲ್ಲಿ ತಮ್ಮ ಜೀವನವನ್ನು ಸಾಗಿಸಿದ್ರು. ಆದ್ರೆ ನಿಮ್ಮ ಜೀವನ ಕಷ್ಟಕರವಾಗಲು ನಾನು ಬಿಡೋದಿಲ್ಲ ಅಂತ ಭರವಸೆ ನೀಡ್ತಿದ್ದೀನಿ ಅಂದ್ರು.

-masthmagaa.com

Contact Us for Advertisement

Leave a Reply