ಬಾಹ್ಯಾಕಾಶದಲಿ ನಡೆಯಲಿದ್ದಾರೆ ಈ ಇಬ್ಬರು ಮಹಿಳೆಯರು..!

ಬಾಹ್ಯಾಕಾಶದಲ್ಲಿ ಇತಿಹಾಸ ನಿರ್ಮಾಣವಾಗಲಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಬಂದು ಬಾಹ್ಯಾಕಾಶದಲ್ಲಿ ನಡೆಯಲಿದ್ದಾರೆ. ಜೆಸಿಕಾ ಮೀರ್ ಮತ್ತು ಕ್ರಿಸ್ಟಿನಾ ಕೋಚ್ ಎಂಬ ಗಗನಯಾತ್ರಿಗಳು ಅಕ್ಟೋಬರ್ 21ರಂದು ಬಾಹ್ಯಾಕಾಶದಿಂದ ಹೊರಬರಲಿದ್ದಾರೆ. ಜೊತೆಗೆ ಬಾಹ್ಯಾಕಾಶ ನಿಲ್ದಾಣದ ಸೋಲಾರ್ ಪ್ಯಾನಲ್‍ನಲ್ಲಿ ಅಳವಡಿಸಿರುವ ಲೀಥಿಯಂ ಬ್ಯಾಟರಿಯನ್ನು ಬದಲಿಸಲಿದ್ದಾರೆ. ಕಳೆದ ಮಾರ್ಚ್‍ನಲ್ಲೇ ಈ ಸಾಹಸಕ್ಕೆ ಮುಹೂರ್ತ ನಿಗದಿಯಾಗಿತ್ತು. ಆದ್ರೆ ಸ್ಪೇಸ್ ಸೂಟ್ ಇಲ್ಲದ ಕಾರಣ ಈ ಕಾರ್ಯವನ್ನು ಮುಂದೂಡಲಾಗಿತ್ತು. ಅಕ್ಟೋಬರ್ ತಿಂಗಳಲ್ಲಿ ಒಟ್ಟು 5 ಬಾರಿ ಸ್ಪೇಸ್‍ವಾಕ್ ಮಾಡಲು ನಿರ್ಧರಿಸಲಾಗಿದೆ. ಈ ವೇಳೆ 6 ಮಂದಿ ಗಗನಯಾತ್ರಿಗಳು ಹೊರಬಂದು ಸ್ಪೇಸ್ ಸ್ಟೇಷನ್ ರಿಪೇರಿ ಮಾಡಲಿದ್ದಾರೆ. ಮುಂದಿನ ನವೆಂಬರ್ ಮತ್ತು ಡಿಸೆಂಬರ್‍ನಲ್ಲಿ ಮತ್ತೈದು ಸ್ಪೇಸ್ ವಾಕ್ ನಡೆಯಲಿದೆ.

Contact Us for Advertisement

Leave a Reply