ಮಂಗಳ ಗ್ರಹಕ್ಕೆ ಹೋಗಬೇಕಾ..? ನಾಸಾಗೆ ಹೀಗೆ ಅರ್ಜಿ ಸಲ್ಲಿಸಿ..

masthmagaa.com:

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ 2030ರ ವೇಳೆಗೆ ಮಂಗಳ ಗ್ರಹಕ್ಕೆ ಮನುಷ್ಯರನ್ನು ಕಳುಹಿಸಲು ಪ್ಲಾನ್ ಹಾಕ್ಕೊಂಡಿದೆ. ಆದ್ರೆ ಅದಕ್ಕೂ ಮುನ್ನ ಭೂಮಿಯೇ ಮೇಲೆಯೇ ಒಂದು ಕೃತಕವಾಗಿ ಮಂಗಳ ಗ್ರಹದ ವಾತಾವರಣವಿರೋ ಮಾದರಿ ರಚಿಸಿ, ಅದ್ರೊಳಗೆ ಮನುಷ್ಯರನ್ನು ಕಳುಹಿಸಿ ಪ್ರಯೋಗಕ್ಕೆ ಮುಂದಾಗಿದೆ. ಪ್ರಯೋಗ ಅನ್ನೋದಕ್ಕಿಂತಲೂ ತರಬೇತಿ ನೀಡಲು ಮುಂದಾಗಿದೆ. ಅದಕ್ಕಾಗಿ ಅರ್ಜಿ ಆಹ್ವಾನಿಸಿದೆ. ಯಾರಿಗೆಲ್ಲಾ ಮಂಗಳ ಗ್ರಹಕ್ಕೆ ಯಾತ್ರೆ ಕೈಗೊಳ್ಳಲು ಇಂಟ್ರೆಸ್ಟ್​ ಇದ್ಯೋ ಅಂಥವರು ಅರ್ಜಿ ಸಲ್ಲಿಸಬಹುದು ಅಂತ ತಿಳಿಸಿದೆ. ಅರ್ಜಿ ಸಲ್ಲಿಸಿದವರಲ್ಲಿ ನಾಲ್ವರನ್ನು ಸೆಲೆಕ್ಟ್​ ಮಾಡಿ, ಮಂಗಳ ಗ್ರಹದ ವಾತಾವರಣ ಇರೋ ಮಾರ್ಸ್​ ಡ್ಯೂನ್ ಆಲ್ಫಾದಲ್ಲಿ ಟ್ರೇನಿಂಗ್ ನೀಡಲಾಗುತ್ತೆ. 2022ರಲ್ಲಿ ಈ ಟ್ರೇನಿಂಗ್ ಶುರುವಾಗಲಿದ್ದು, ಒಂದು ವರ್ಷದವರೆಗೆ ನಡೆಯುತ್ತೆ. ಅಂದಹಾಗೆ ಮಂಗಳ ಗ್ರಹದ ಈ ಮಾಡ್ಯೂಲ್ 1700 ಚದರ ಅಡಿ ಇದೆ. ಈ ಮೂಲಕ ನಾಸಾ ಮಂಗಳ ಗ್ರಹದ ವಾತಾವರಣದಲ್ಲಿ ಮನುಷ್ಯರು ಎಷ್ಟು ಟೈಂ ಇರಬಹುದು.. ಈ ಅವಧಿಯಲ್ಲಿ ಮನುಷ್ಯನಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತೆ ಅನ್ನೋದನ್ನು ಅಧ್ಯಯನ ಮಾಡಲಿದೆ. ಅಂದ್ರೆ ಈಗ ಯಾರೋ ಒಬ್ಬ ಹಾರ್ಕೊಂಡು ಹೋಗಿ ಮಂಗಳ ಗ್ರಹದಲ್ಲಿ ಬಿದ್ಬಿಟ್ಟ ಅನ್ಕೊಳ್ಳಿ.. ಆತ ಅಲ್ಲಿ ಏನೆಲ್ಲಾ ಸವಾಲುಗಳನ್ನು ಎದುರಿಸ್ತಾನೋ ಈ ಟ್ರೇನಿಂಗ್​ನಲ್ಲೂ ಆ ಎಲ್ಲಾ ಸವಾಲುಗಳು ಎದುರಾಗಲಿವೆ.. ಹಾಗಾದ್ರೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಅಂತ ನೋಡೋದಾದ್ರೆ..,

30ರಿಂದ 55 ವರ್ಷದ ಒಳಗಿನವರಾಗಿರಬೇಕು
ಅಮೆರಿಕ ನಾಗರಿಕರಾಗಿರೋದು ಅನಿವಾರ್ಯ
ಫಿಸಿಕಲಿ ಆರೋಗ್ಯಕರವಾಗಿರಬೇಕು, ಧೂಮಪಾನ ಮಾಡ್ಬಾರ್ದು
ಇಂಗ್ಲಿಷ್​ನಲ್ಲಿ ಪಂಟರ್ ಆಗಿರಬೇಕು
ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತದಂತಹ ಕ್ಷೇತ್ರದಲ್ಲಿ ಪಿಜಿ ಆಗಿರಬೇಕು ಮತ್ತು ಈ ಕ್ಷೇತ್ರದಲ್ಲಿ 2 ವರ್ಷ ಕೆಲಸ ಮಾಡಿದ ಅನುಭವ ಇರಬೇಕು

-masthmagaa.com

Contact Us for Advertisement

Leave a Reply