1ದಿನ MLA ಆದ್ರೂ ₹20,000 ಪೆನ್ಶನ್! ಆದ್ರೆ 35 ವರ್ಷ ಕೆಲ್ಸಕ್ಕೆ ಬರೀ ₹2,234!

masthmagaa.com:

ಮಧ್ಯ ಪ್ರದೇಶದಲ್ಲಿ ಪಿಂಚಣಿ ವಿಚಾರವಾಗಿ ಭಾರಿ ಚರ್ಚೆ ಕೇಳಿ ಬರ್ತಿವೆ. 68 ವರ್ಷದ ಸುರೇಂದ್ರ ಕುಮಾರ್‌ ಅನ್ನೊ ಹಿರಿಯ ವ್ಯಕ್ತಿ ಒಬ್ರು ಮಧ್ಯ ಪ್ರದೇಶದ ಡೈರಿ ಇಲಾಖೆಯಲ್ಲಿ 35 ವರ್ಷಗಳ ಕಾಲ ಕೆಲ್ಸ ಮಾಡಿದ್ದಾರೆ. ಹಾಗೂ ಈಗ ನಿವೃತ್ತಿ ಹೊಂದಿದ್ದು, ತಿಂಗಳಿಗೆ 2,234 ರೂಪಾಯಿಯನ್ನ ಪಿಂಚಣಿಯಾಗಿ ಪಡಿತಿದಾರೆ. ಆದ್ರೆ ಇದೆ ರಾಜ್ಯದಲ್ಲಿ ಕೇವಲ ಒಂದು ದಿನಕ್ಕೆ MLA ಆದ್ರು ಕೂಡ, ಅವ್ರು ವೈದ್ಯಕೀಯ ಮತ್ತು ಇತರ ಸವಲತ್ತುಗಳ ಜೊತೆಗೆ, ತಿಂಗಳಿಗೆ 20,000 ರೂಪಾಯಿಗಳ ಪಿಂಚಣಿಗೆ ಅರ್ಹರಾಗ್ತಾರೆ. ಸೋ ಇಲ್ಲಿ ದೊಡ್ಡ ಪ್ರಮಾಣದ ಭೇದಭಾವ ಇದೆ ಅಂತ ಆಕ್ರೋಶ ವ್ಯಕ್ತವಾಗ್ತಿದೆ. ಹಳೇ ಪೆನ್ಶನ್ ಸಿಸ್ಟಮ್ಮೇ ವಾಪಸ್ ಬರಲಿ ಅಂತ ಸರ್ಕಾರಿ ನೌಕರರು ಬೇಡಿಕೆ ಇಡ್ತಿದ್ದಾರೆ. ಈ ವಿಚಾರವಾಗಿ ದೇಶದ ಅಲ್ಲಲ್ಲಿ ಪ್ರತಿಭಟನೆ ಕೂಡ ಆಗ್ತಿದೆ.

-masthmagaa.com

Contact Us for Advertisement

Leave a Reply