ಚೀನಾದಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಮುಖ ನಗರಗಳು ಕುಸಿತ ಕಾಣ್ತಿವೆ: ವರದಿ!

masthmagaa.com:

ಸಮುದ್ರ ಮಟ್ಟ ಹೆಚ್ಚಾಗ್ತಿರೊದ್ರಿಂದ ಚೀನಾದಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಮುಖ ನಗರಗಳು ಕುಸಿತ ಕಾಣ್ತಿವೆ ಅಂತ ವರದಿಯೊಂದು ಹೇಳಿದೆ. ಸೌತ್‌ ಚೀನಾ ನಾರ್ಮಲ್‌ ಯೂನಿರ್ವಸಿಟಿ ನಡೆಸಿರೋ ಈ ಅಧ್ಯಯನದಲ್ಲಿ ಚೀನಾದ ಸಮಗ್ರ ಉಪಗ್ರಹ ಮಾಹಿತಿಯನ್ನ ಸ್ಟಡಿ ಮಾಡಲಾಗಿದೆ. ಇದರಿಂದ ಅನೇಕ ಜನ ಪ್ರವಾಹಕ್ಕೆ ಸಿಲುಕಿಕೊಳ್ಳೊ ಸಾಧ್ಯತೆ ಇದೆ ಅಂತ ವರದಿ ತಿಳಿಸಿದೆ. ಜೊತೆಗೆ ಚೀನಾದ 45% ನಷ್ಟು ನಗರ ಪ್ರದೇಶಗಳು ವರ್ಷಕ್ಕೆ 3 ಮಿಲಿ ಮೀಟರ್‌ಗಳಿಗಿಂತ ವೇಗವಾಗಿ ಮುಳುಗಡೆಯಾಗ್ತಿವೆ ಅಂತ ರಿಪೋರ್ಟ್‌ ಹೇಳಿದೆ. ಅಲ್ಲದೇ 16%ನಷ್ಟು ನಗರಗಳು ವರ್ಷಕ್ಕೆ 10 ಮಿಮೀ ವೇಗವಾಗಿ ಕುಸೀತಿವೆ. ಚೀನಾದ ನಗರ ಪ್ರದೇಶಗಳಲ್ಲಿ ಈಗಾಗ್ಲೇ 900 ಮಿಲಿಯನ್‌ ಅಂದ್ರೆ 90 ಕೋಟಿಗೂ ಅಧಿಕ ಜನ ವಾಸಿಸ್ತಿದ್ದು, ತೀವ್ರ ಮಟ್ಟದ ಭೂ ಕುಸಿತ ಅವ್ರಿಗೆಲ್ಲ ಭಾರಿ ಅಪಾಯ ತಂದೊಡ್ಡಬಹುದು ಅಂತ ಅಧ್ಯಯನ ಕಳವಳ ವ್ಯಕ್ತ ಪಡಿಸಿದೆ. ಜೊತೆಗೆ ಈ ರೀತಿ ನೀರು ಭೂಮಿಯನ್ನ ಕಸೀತಿರೋದ್ರಿಂದ ಚೀನಾಗೆ ವರ್ಷಕ್ಕೆ 1.4 ಬಿಲಿಯನ್‌ ಅಂದ್ರೆ 11.6 ಸಾವಿರ ಕೋಟಿ ನಷ್ಟವಾಗ್ತಿದೆ. ಮುಂದಿನ ಶತಮಾನದ ಒಳಗೆ ಚೀನಾದ ಕಾಲುಭಾಗ ಕಡಲು ತೀರ ಸಮುದ್ರಮಟ್ಟಕ್ಕಿಂತ ಕೆಳಗಿರುತ್ತೆ ಅಂತ ಹೇಳಲಾಗಿದೆ. ಇನ್ನು ಈ ಸಮಸ್ಯೆ ಕೇವಲ ಚೀನಾದಷ್ಟೇ ಅಲ್ಲ ಫೆಬ್ರುವರಿ ಒಂದು ವರದಿ ಪ್ರಕಾರ ಜಾಗತಿಕವಾಗಿ 63 ಲಕ್ಷ ಚದರ ಕಿ.ಮೀ ಭೂಪ್ರದೇಶ ನೀರಲ್ಲಿ ಮುಳುಗೋ ಅಪಾಯ ಎದುರಿಸ್ತಿದೆ. ಇಂಡೋನೇಷ್ಯಾಗೆ ಇದರ ಎಫೆಕ್ಟ್‌ ಜಾಸ್ತಿ ಇರಲಿದೆ. ರಾಜಧಾನಿ ಜಕಾರ್ತ ಈಗಾಗಲೇ ಸೀ ಲೆವಲ್‌ಗಿಂತ ಕಡಿಮೆ ಎತ್ತರದಲ್ಲಿದೆ. ಈ ಹಿಂದೆ ಟೋಕಿಯೋ ಕೂಡ ಇದೇ ರೀತಿ ಅಪಾಯ ಎದುರಿಸಿತ್ತು. ನೀರಲ್ಲಿ 5 ಮೀಟರ್‌ ಮುಳುಗಿತ್ತು. ಆದ್ರೆ ಜಪಾನ್‌ ಸರ್ಕಾರ ಅಂತರ್ಜಲ ಎತ್ತೋದನ್ನ ನಿಷೇಧಿಸಿದ ಮೇಲೆ ಮುಳುಗೋದು ನಿಂತಿತ್ತು.

-masthmagaa.com

Contact Us for Advertisement

Leave a Reply