ಅಮೆರಿಕದಲ್ಲಿ ಮತ್ತೆ ಭಾರತೀಯ ವಿದ್ಯಾರ್ಥಿಯ ಶವ ಪತ್ತೆ!

masthmagaa.com:

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ತಿರೋ ಘಟನೆಗಳು ಮುಂದುವರೆದಿದೆ. ಇದೀಗ ಅಲ್ಲಿನ ಪರ್ಡ್ಯೂ ಯುನಿವರ್ಸಿಟಿಯಲ್ಲಿ ನೀಲ್ ಆಚಾರ್ಯ ಅನ್ನೋ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದಾನೆ. ಅಂದ್ಹಾಗೆ ಜನವರಿ 28 ರಂದು ವ್ರ ತಾಯಿ ಗೌರಿ ಆಚಾರ್ಯ ನೀಲ್‌ ಕಾಣೆಯಾಗಿದ್ದಾನೆ ಅಂತ ಅಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ರು. ಇದಕ್ಕೆ ಪ್ರತಿಕ್ರಿಯಿಸಿದ್ದ ಚಿಕಾಗೋದಲ್ಲಿನ ಭಾರತೀಯ ರಾಯಭಾರಿ ಕಚೇರಿ, ನಾವು ಪರ್ಡ್ಯೂ ಯುನಿವರ್ಸಿಟಿ ಅಧಿಕಾರಿಗಳನ್ನ ಸಂಪರ್ಕಿಸಿ, ಈ ಬಗ್ಗೆ ಎಲ್ಲ ಸಹಾಯ ಮಾಡ್ತೀವಿ ಅಂತ ಹೇಳಿತ್ತು. ಆದ್ರೆ ಇದಾದ ಕೆಲ ಗಂಟೆಗಳಲ್ಲಿ ನೀಲ್‌ ಪರ್ಡ್ಯೂ ಯುನಿವರ್ಸಿಟಿ ಕ್ಯಾಂಪಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಅಂದ್ಹಾಗೆ ಕಳೆದ ವಾರವಷ್ಟೇ ಅಮೆರಿಕದ ಜಾರ್ಜಿಯಾದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನನ್ನ ಸುತ್ತಿಗೆಯಿಂದ ಬರ್ಬರವಾಗಿ ಹತ್ಯೆ ಮಾಡಲಾಗಿತು.

-masthmagaa.com

Contact Us for Advertisement

Leave a Reply