ಪಾಕ್‌ನಲ್ಲಿ ನೂತನ ಮಂತ್ರಿ ಮಂಡಲ. ಭಾರತಕ್ಕೇನು ಲಾಭ?

mashmagaa.com:

ಇಮ್ರಾನ್‌ನ ಓಡಿಸಿದ ಒಂದೇ ವಾರದಲ್ಲಿ ಪಾಕ್‌ ನೂತನ ಪಿಎಂ ಶಹಬಾಜ್‌ ಶರೀಫ್‌ ಮಂತ್ರಿ ಮಂಡಲವನ್ನ ರಚಿಸಿದ್ದಾರೆ. 37 ಸಚಿವರ ಈ ಸಂಪುಟ ಹಲವು ಅಡೆತಡೆಗಳ ನಂತ್ರ ಕೊನೆಗೂ ಪೂರ್ಣಗೊಂಡಿದೆ. ಪ್ರಮಾಣವಚನ ಸ್ವೀಕಾರದ ಕೊನೇ ಘಳಿಗೆಯಲ್ಲಿ ಪಾಕ್‌ ಅಧ್ಯಕ್ಷ ಅನಾರೋಗ್ಯ ಕಾರಣದಿಂದ ಗೈರಾದ್ರಿಂದ ಸಂಸತ್‌ನ ಕಾರ್ಯದರ್ಶಿಯೇ ಸಚಿವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ. ಇನ್ನು ಶಹಬಾಜ್‌ ಶರೀಫ್‌ರ ಈ ಮಂತ್ರಿಮಂಡಲದಲ್ಲಿ ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿಯ ಮುಖ್ಯಸ್ಥ ಬಿಲಾವಲ್‌ ಭುಟ್ಟೋ ಜರ್ದಾರಿ ಮತ್ತು ಪಾಕ್‌ ಮಾಜಿ ಪಿಎಂ ಶಹೀದ್‌ ಖಾನ್‌ ಅಬ್ಬಾಸಿ ಇಲ್ಲದೇ ಇರೋದು ಪ್ರಮುಖವಾಗಿ ಕಾಣಿಸ್ತಾ ಇದೆ. ಮೂಲಗಳ ಪ್ರಕಾರ ಇನ್ನ ಕೆಲವು ದಿನಗಳಲ್ಲಿ ಬಿಲಾವಲ್‌ಗೆ ಆರ್ಥಿಕ ಇಲಾಖೆ ಜವಾಬ್ದಾರಿ ಕೋಡೊದಾಗಿ ಹೇಳಿದ್ದಾರಂತೆ. ಇನ್ನು ಈ ಹಿಂದೆ ವಿದೇಶಾಂಗ ಇಲಾಖೆ ಸಚಿವೆ ಆಗಿದ್ದ ಪಿಪಿಪಿನ ಹೀನಾ ರಬ್ಬಾನಿ ಖರ್‌ ಅವ್ರನ್ನ ಅದೇ ಇಲಾಖೆಗೆ ರಾಜ್ಯ ಖಾತೆ ಸಚಿವೆ ಆಗಿ ನೇಮಿಸಿದ್ದಾರೆ. ಹೀನಾ ಅವ್ರಿಗೆ ಜೂನಿಯರ್‌ ರೋಲ್‌ನಲ್ಲಾದ್ರು ವಿದೇಶಾಂಗ ಇಲಾಖೆಯಲ್ಲಿ ಸೇರಿಸ್ಕೊಂಡಿರೋದನ್ನ ಭಾರತದ ಅಧಿಕಾರಿಗಳು ಸಕಾರಾತ್ಮಕ ನಡೆ ಅಂತ ಬಣ್ಣಿಸಿದ್ದಾರೆ. ಹೀನಾ ರಬ್ಬಾನಿ ಈ ಹಿಂದೆ ಭಾರತದೊಂದಿಗೆ ಸಂಬಂಧವನ್ನ ಗಟ್ಟಿಗೊಳಿಸೋದನ್ನ ಪ್ರತಿಪಾದಿಸಿದ್ರು. ಇನ್ನು 2011ರಲ್ಲಿ ಭಾರತಕ್ಕೆ ಭೇಟಿ ನೀಡಿದ ನಂತ್ರ ಅವ್ರು, ಪಾಕಿಸ್ತಾನ 26/11 ಅಂದ್ರೆ ಮುಂಬೈ ದಾಳಿ ಭಾರತಕ್ಕೆ ಎಷ್ಟು ಸೂಕ್ಷ್ಮವಾಗಿದ್ದು ಅನ್ನೋದನ್ನ ಅರ್ಥ ಮಾಡ್ಕೋಬೇಕು ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply