masthmagaa.com:

ಮನುಷ್ಯನ ಬುದ್ಧಿ ಹೆಚ್ಚಿದಂತೆ ಭೂಮಿ ನಾಶವಾದ್ರೆ ಏನ್ಮಾಡೋದು ಅನ್ನೋ ಭಯ ಕೂಡ ಹೆಚ್ಚಾಗುತ್ತಲೇ ಇದೆ. ಹೀಗಾಗಿಯೇ ಭೂಮಿ ಮೇಲಿನ ಎಲ್ಲ ಜೀವಿಗಳೂ, ಸಸ್ಯಗಳೂ, ಬೀಜಗಳೂ ನಾಶವಾದ್ರೆ? ಮನುಷ್ಯರೂ ಬಹುತೇಕ ನಾಶವಾಗಿ ಕೆಲವೇ ಕೆಲವರು ಉಳಿದಕೊಂಡ್ರೆ? ಆಗ ಮತ್ತೆ ಭೂಮಿಯನ್ನ ಮೊದಲಿನಂತೆ ಮಾಡೋದು ಹೇಗೆ? ಮತ್ತೆ ಭೂಮಿ ಜೀವ ವೈವಿದ್ಯತೆಯಿಂದ ಕಂಗೊಳಿಸೋ ಹಾಗೇ ಮಾಡೋದು ಹೇಗೆ? ಈ ಬಗ್ಗೆ ಈಗ ಅಮೆರಿಕ ವಿಜ್ಞಾನಿಗಳು ವಿಚಿತ್ರ ಸಾಹಸಕ್ಕೆ ಮುಂದಾಗಿದ್ದಾರೆ.

ಚಂದ್ರನ ಮೇಲೆ ಮನುಷ್ಯರ ವೀರ್ಯ, ಜೀವಿಗಳ ಮೊಟ್ಟೆ ಸೇರಿದಂತೆ ಹಲವು ಜೈವಿಕ ಅಂಶಗಳನ್ನು ಕಳುಹಿಸಿಕೊಡಲು ಪ್ಲಾನ್ ಮಾಡ್ತಿದ್ದಾರೆ. ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರ, ಇದ್ರ ಮೇಲೆ ಮನುಷ್ಯರು ಶಾಶ್ವತವಾಗಿ ನೆಲೆಸಲು ಸಾಧ್ಯವಿಲ್ಲ. ಆದ್ರೂ ಕೂಡ ಅದನ್ನು ಅತೀ ಅಮೂಲ್ಯ ವಸ್ತುಗಳನ್ನು ಶೇಖರಿಸಿಡುವ ಸ್ಟೋರೇಜ್ ರೀತಿ ಬಳಸಲು ಸಾಧ್ಯವಾಗುತ್ತಾ ಅಂತ ಸಂಶೋಧನೆಗೆ ಹೊರಟಿದ್ದಾರೆ.

ಇದೇ ಉದ್ದೇಶ ಇಟ್ಕೊಂಡು ಚಂದ್ರನ ಮೇಲೋಂದು ಜೀನ್ ಬ್ಯಾಂಕ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದ್ರಲ್ಲಿ ಮನುಷ್ಯ ಸೇರಿದಂತೆ ಭೂಮಿ ಮೇಲಿನ 67 ಲಕ್ಷ ಜೀವಿಗಳ ವೀರ್ಯ, ಅಂಡಾಣು, ಮೊಟ್ಟೆಗಳು ಮತ್ತು ಇತರೆ ಜೈವಿಕ ಅಂಶಗಳನ್ನು ಶೇಖರಿಸಿಡೋದು ವಿಜ್ಞಾನಿಗಳ ಪ್ಲಾನ್.. ಅಮೆರಿಕದ ಯೂನಿವರ್ಸಿಟಿ ಆಫ್ ಅರಿಜೋನಾದ ವಿಜ್ಞಾನಿಗಳು ಈ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಭೂಮಿಯಲ್ಲಿ ದಿನೇ ದಿನೇ ಅಸ್ಥಿರತೆ ಜಾಸ್ತಿಯಾಗ್ತಾನೇ ಇದೆ.. ಇಲ್ಲಿ ಯಾವಾಗ ಏನಾಗುತ್ತೋ ಗ್ಯಾರಂಟಿ ಇಲ್ಲ. ಹೀಗಾಗಿ ಇಲ್ಲಿ ಎಷ್ಟೇ ಮಾದರಿ ಸಂಗ್ರಹ ಮಾಡಿಡ್ರೂ ಅವು ಸೇಫ್ ಅಲ್ಲ.. ಹೀಗಾಗಿ ಅವುಗಳನ್ನು ದೂರದ ಚಂದ್ರನ ಮೇಲೆ ಸುರಕ್ಷಿತವಾಗಿ ಇಡಬಹುದು ಅಂತ ವಿಜ್ಞಾನಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply