ಹವಾಮಾನ ಬದಲಾವಣೆ ಸಂಬಂಧ ನ್ಯೂಜಿಲೆಂಡ್ ಹೊಸ ಕಾನೂನು

masthmagaa.com:

ಹವಾಮಾನ ಬದಲಾವಣೆ ಸಂಬಂಧ ನ್ಯೂಜಿಲೆಂಡ್ ಹೊಸ ಕಾನೂನು ಪಾಸ್ ಮಾಡಿದೆ. ಇನ್ನುಮುಂದೆ ನ್ಯೂಜಿಲೆಂಡ್ ಬ್ಯಾಂಕ್ ಗಳು ಹಾಗೂ ಇನ್ವೆಸ್ಟ್ಮೆಂಟ್ ಕಂಪನಿಗಳು ತಮ್ಮ ಇನ್ವೆಸ್ಟ್ಮೆಂಟ್ ಇರೋ ಕಂಪನಿಗಳಲ್ಲಿ ಗ್ಲೋಬಲ್ ವಾರ್ಮಿಂಗ್ ಕಾರಣ ಆಗೋ ಕೆಲಸಗಳು ನಡಿಯುತ್ತಾ ಇವೆಯ ಅನ್ನೋದನ್ನ ವರದಿ ಮಾಡ್ಬೇಕಾಗುತ್ತೆ. ಬ್ಯಾಂಕ್ ಸಾಲ ಕೊಟ್ಟಿದ್ದರೆ, ಸಾಲ ಪಡೆದ ಕಂಪನಿಗಳು ತಮ್ಮ ಬ್ಯುಸಿನೆಸ್‌ನಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನ ಕೈಗೊಂಡಿದ್ದಾರಾ ಇಲ್ವಾ ಅನ್ನೋದನ್ನ ಹೇಳಬೇಕಾಗುತ್ತೆ. ಇದ್ರಿಂದ ದೇಶದ ಉದ್ಯಮ ಸಂಸ್ಥೆಗಳಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನ ಎನ್ಕರೇಜ್ ಮಾಡಿದಂತಾಗುತ್ತೆ ಅಂತ ನ್ಯೂಜಿಲೆಂಡ್ ಈ ರೀತಿ ಮಾಡಿದೆ. ಹೊಟ್ಟೆ ತುಂಬಿದ ಮೇಲೆ ಇಂಥದ್ದೆಲ್ಲ ಮಾಡಬೋದು. ಹೊಟ್ಟೆ ಖಾಲಿ ಇದ್ರೆ ಹೇಗಾದ್ರೂ ಸರಿ ಮೊದಲ ಅದನ್ನ ತುಂಬಿಸಬೇಕು ಅಂತ ಮೊದಲು ಅದರ ಕಡೆ ಗಮನ ಹೋಗುತ್ತೆ. ಇದೇ ಮುಂದುವರಿದ ದೇಶಗಳಿಗೂ-ಹಿಂದುಳಿದ ದೇಶಗಳಿಗೂ ಇರೋ ವ್ಯತ್ಯಾಸ.

-masthmagaa.com

Contact Us for Advertisement

Leave a Reply