ʼರಾಮೇಶ್ವರಂ ಕೆಫೆಗೆ ಸ್ಪೋಟಕ ತಿರುವು: ನಕಲಿ ಗಡ್ಡ!

masthmagaa.com:

ದೇಶವನ್ನೇ ಬೆಚ್ಚಿಬೀಳಿಸಿದ್ದ ಬೆಂಗಳೂರಿನ ರಾಮೇಶ್ವರಂ ಕೆಫೆ ಪ್ರಕರಣದಲ್ಲಿ ಮಹತ್ವದ ಬೆಳಣಿಗೆಗಳು ಆಗ್ತಿವೆ. ಭಯೋತ್ಪಾದಕರಿಗೆ ತೀವ್ರ ಹುಡುಕಾಟ ನಡೆಸ್ತಿರೋ ಎನ್‌ಐಎ ಈಗ ಇಬ್ಬರು ಶಂಕಿತರ ಫೋಟೋ ರಿಲೀಸ್‌ ಮಾಡಿದೆ. ಅವರು ಈ ಸ್ಪೋಟದ ಪ್ರಮುಖ ರೂವಾರಿಗಳು ಅಂತ ಎನ್‌ಐಎ ಹೇಳಿದೆ. ಆ ಪೈಕಿ ಒಬ್ಬನ ಹೆಸರು ಮುಸ್ಸಾವಿರ್‌ ಹುಸೇನ್ ಶಜೀಬ್…ಇನ್ನೊಬ್ಬನ ಹೆಸರು ಅಬ್ದುಲ್‌ ಮಥೀನ್ ಅಹ್ಮದ್ ತಾಹಾ ಅಂತ.. ಈ ಇಬ್ರೂ ಸುಮಾರು ಮೂರು ಮೂರು ಅವತಾರಗಳಲ್ಲಿ ಇರೋ ಫೋಟೊವನ್ನ ಎನ್‌ಐಎ ಶೇರ್‌ ಮಾಡ್ಕೊಂಡಿದೆ. ಅದರಲ್ಲಿ ಅಬ್ದುಲ್‌ ಮತೀನ್‌ ಅನ್ನೋನು ನಾಲ್ಕೈದು ಹೆಸರುಗಳನ್ನ ಇಟ್ಕೊಂಡಿದ್ದ. ಅದರಲ್ಲಿ ವಿಘ್ನೇಶ್‌ ಮತ್ತು ಸುಮಿತ್‌ ಅಂತಲೂ ಗುರುತಿಸಿಕೊಂಡಿದ್ದ ಅಂತ ಎನ್‌ಐಎ ಹೇಳಿದೆ. ಈಗ ಇಬ್ರ ಮೇಲೂ ತಲಾ 10 ಲಕ್ಷ ರೂಪಾಯಿ ಅನೌನ್ಸ್‌ ಮಾಡಲಾಗಿದೆ. ಇನ್ನು ಇತ್ತೀಚಿಗಷ್ಟೇ NIA ಈ ಸ್ಪೋಟದ ವಿಚಾರವಾಗಿ ತನ್ನ ಕಾರ್ಯಾಚರಣೆಯನ್ನ ಚುರುಕು ಗೊಳಿಸಿತ್ತು. ಅದ್ರಂತೆ ಶಿವಮೊಗ್ಗದ 5 ವಿವಿಧ ಪ್ರದೇಶಗಳಲ್ಲಿ, ತಮಿಳುನಾಡಿನ ಚೆನ್ನೈ ಸೇರಿದಂತೆ ಒಟ್ಟು 3 ರಾಜ್ಯಗಳ 18 ಪ್ರದೇಶಗಳಲ್ಲಿ ಶಂಕಿತರ ಮನೆ ಮೇಲೆ ದಾಳಿ ಮಾಡಿತ್ತು. ಈ ವೇಳೆ ಇಬ್ಬರನ್ನ ವಶಕ್ಕೆ ಪಡೆದು ವಿಚಾರ ನಡೆಸಿತ್ತು. ಸೋ ಆ ವಿಚಾರಣೆ ಬಳಿಕ ಎನ್‌ಐಎ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ಅಂತ ಇಬ್ರನ್ನ ಗುರುತಿಸಿತ್ತು. ಆದ್ರೆ ಅವರಿಬ್ರೂ ಪರಾರಿಯಾಗಿದ್ದಾರೆ. ಹೀಗಾಗಿ ಅವರ ಮಾಹಿತಿ ಕೊಟ್ರೆ ಬಹುಮಾನ ಕೊಡ್ತೀವಿ ಅಂತ ತನಿಖಾ ದಳ ತಿಳಿಸಿದೆ. ಅಂದ್ಹಾಗೆ ಬೆಂಗಳೂರಿನ ಬ್ರೂಕ್‌ಫೀಲ್ಡ್‌ನ ಐಟಿಪಿಎಲ್ ರಸ್ತೆಯಲ್ಲಿರೊ ರಾಮೇಶ್ವರಂಕೆಫೆಯಲ್ಲಿ ಮಾರ್ಚ್ 1ರಂದು ಹ್ಯಾಂಡ್‌ಬ್ಯಾಗ್‌ನಲ್ಲಿ ಸ್ಪೋಟಕ ಬಚ್ಚಿಡಲಾಗಿತ್ತು. ಬಳಿಕ ಸುಧಾರಿತ ಸ್ಫೋಟಕ ಸಾಧನ ಸ್ಫೋಟಗೊಂಡ ನಂತರ ನೌಕರರು ಮತ್ತು ಗ್ರಾಹಕರು ಸೇರಿದಂತೆ 9ಕ್ಕೂ ಹೆಚ್ಚು ಜನರು ಗಾಯಗೊಂಡಿದ್ರು. ಸ್ಫೋಟದಿಂದ ಆಸ್ತಿಪಾಸ್ತಿಗೂ ಹಾನಿಯಾಗಿತ್ತು.

-masathmagaa.com

Contact Us for Advertisement

Leave a Reply