ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟದಲ್ಲಿ ಪಾಕಿಸ್ತಾನದ ಕೈವಾಡ!

masthmagaa.com:

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಈಗ ದೊಡ್ಡ ಟ್ವಿಸ್ಟ್‌ ಸಿಕ್ಕಿದೆ. ವೈಟ್‌ಫೀಲ್ಡ್‌ನ ಈ ಸ್ಪೋಟದಲ್ಲಿ, ಭಯೋತ್ಪಾದನೆಯನ್ನೇ ತಮ್ಮ ನೀತಿಯಾಗಿಸಿಕೊಂಡು ಸದಾ ಭಾರತದ ವಿರುದ್ಧ ಕತ್ತಿಮಸೆಯುವ ಉಗ್ರಪೋಷಕ ಪಾಕ್‌ ಕೈವಾಡ ಇದೆ ಅನ್ನೋ ಸ್ಪೋಟಕ ಮಾಹಿತಿ ಬಹಿರಂಗ ಆಗಿದೆ. ಮಾರ್ಚ್‌ 1ರಂದು ಬೆಂಗಳೂರಿನ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ಸಂಭವಿಸಿತ್ತು. ಇದ್ರ ಬೆನ್ಹತ್ತಿದ NIA ತಂಡ ಬರೋಬ್ಬರಿ ಒಂದು ತಿಂಗಳ ನಂತ್ರ…ಸಾಕಷ್ಟು ಕಾರ್ಯಚರಣೆ…ವಿಚಾರಣೆ ಮಾಡಿದ ಬಳಿಕ ಆರೋಪಿಗಳಾದ ಮುಸ್ಸಾವೀರ್‌ ಹುಸೈನ್‌ ಶಾಜೀಬ್‌ ಮತ್ತು ಅಬ್ದುಲ್‌ ಮತೀನ್‌ನ ಅರೆಸ್ಟ್‌ ಮಾಡಿದೆ. ಆದ್ರೆ ಇದೀಗ ಇವ್ರ ವಿಚಾರಣೆ ನಡೆಸಲಾಗ್ತಿದ್ದು, ಬೆಂಗಳೂರು ಸ್ಪೋಟಕ್ಕೂ ಪಾಕಿಸ್ತಾನಕ್ಕೂ ಲಿಂಕ್‌ ಇರೋ ಶಂಕೆ ವ್ಯಕ್ತವಾಗಿದೆ. ಆರೋಪಿಗಳಾದ ಮುಸ್ಸಾವೀರ್‌ ಹುಸೈನ್‌ ಶಾಜೀಬ್‌ ಮತ್ತು ಅಬ್ದುಲ್‌ ಮತೀನ್‌ಗೆ ಪಾಕ್‌ ಜೊತೆ ನಂಟಿದೆ ಅನ್ನೋ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ʻಕಲೋನೆಲ್‌ʼ ಅಥ್ವಾ ಕರ್ನಲ್‌ ಅಂತ ಕೋಡ್‌ ನೇಮ್‌ ಹೊಂದಿರೋ ಆನ್‌ಲೈನ್‌ ಹ್ಯಾಂಡ್ಲರ್‌ಗಾಗಿ NIA ತಂಡ ಈಗ ಬೇಟೆಗೆ ಹೊರಟಿದೆ. ಎಸ್‌….ಕರ್ನಲ್‌ ಅಂತ ಕೋಡ್‌ ನೇಮ್‌ ಹೊಂದಿರೋ ವ್ಯಕ್ತಿ ಜೊತೆ ಬಂಧಿತ ಆರೋಪಿಗಳಿಗೆ ನಂಟಿದೆ ಅನ್ನೋ ಶಂಕೆ ವಿಚಾರಣೆ ವೇಳೆ ಬಯಲಾಗಿದೆ. ಅಂದ್ಹಾಗೆ ಈ ʻಕರ್ನಲ್‌ʼ ಎಂಬ ಹೆಸರು, 2022ರಲ್ಲಿ ಮಂಗಳೂರಿನಲ್ಲಿ ನಡೆದ ಕುಕ್ಕರ್‌ ಸ್ಫೋಟದ ಟೈಮ್‌ಲಿ ಕೇಳಿ ಬಂದಿತ್ತು. ಈತನಿಗೂ ಹಾಗೂ ಮಂಗಳೂರಿನ ಕುಕ್ಕರ್‌ ಸ್ಫೋಟಕ್ಕೂ ಲಿಂಕ್‌ ಇದೆ. ಜೊತೆಗೆ ಈತ ಮಿಡ್‌ಲ್‌ಈಸ್ಟ್‌ನಲ್ಲಿ….ಹೆಚ್ಚಿನಾಂಶ ಅಬುಧಾಬಿಯಲ್ಲಿ ಕೂತು ಈ ರೀತಿಯ ಉಗ್ರ ಕಾರ್ಯಚರಣೆ ನಡೆಸ್ತಾನೆ ಅಂತ ಭಯೋತ್ಪಾದನೆ ನಿಗ್ರಹ ದಳದ ಹಿರಿಯ ಅಧಿಕಾರಿಯೊಬ್ರು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ದೇ ಈ ಕರ್ನಲ್‌ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ಸಂಬಂಧ ಹೊಂದಿದ್ದ ಹಾಗೂ ಭಾರತದಲ್ಲಿ ಸ್ಫೋಟ ನಡೆಸೋಕೆ ಐಎಸ್‌ಐ ಜೊತೆ ಸೇರ್ಕೊಂಡು ಪ್ಲಾನ್‌ ಮಾಡ್ತಿದ್ದ. ಇಸ್ಲಾಮಿಕ್‌ ಸ್ಟೇಟ್‌ನ ಪುಟ್ಟದಾದ ಗುಂಪು ರಚಿಸಿ, ಭಾರತೀಯ ಯುವಕರ ಬ್ರೈನ್‌ ವಾಶ್‌ ಮಾಡಿ ಗುಂಪಿಗೆ ನೇಮಕ ಮಾಡೋ ಕೆಲಸ ಮಾಡ್ತಿದ್ದ. ಅದ್ರಲ್ಲೂ ದಕ್ಷಿಣ ಭಾರತವನ್ನ ಗುರಿಯಾಗಿಸಿಕೊಂಡು ಧಾರ್ಮಿಕ ಮತ್ತು ಕೆಲ ಇತರೆ ಪ್ರಮುಖ ಸ್ಥಳಗಳಲ್ಲಿ ಸ್ಫೋಟ ನಡೆಸೋಕೆ ಯುವಕರಿಗೆ ಪ್ರೇರೇಪಿಸ್ತಿದ್ದ. ಅವ್ರಿಗೆ ಫಂಡಿಂಗ್‌ ಮಾಡ್ತಿದ್ದ ಅನ್ನೋ ಮಾಹಿತಿ ಲಭ್ಯವಾಗಿದೆ. ಸೋ…ಇಷ್ಟೊಂದು ಉಗ್ರ ಜಾಲ ಹೊಂದಿರೋ ಕರ್ನಲ್‌ ಹೆಸರು ಇದೀಗ ಬೆಂಗಳೂರು ಕೆಫೆ ಸ್ಫೋಟದಲ್ಲೂ ತಳುಕು ಹಾಕಿಕೊಂಡಿದೆ. ಈ ಅನಾಮಿಕ ವ್ಯಕ್ತಿಯ ಕೈವಾಡವಿರೋ ಸಾಧ್ಯತೆ ಇದೆ ಎನ್ನಲಾಗ್ತಿದೆ. ಇನ್ನು ಕೆಫೆ ಸ್ಪೋಟ ಸಂಬಂಧ ಬಂಧಿತ ಆರೋಪಿಗಳು ಐಎಸ್‌ ಅಲ್‌-ಹಿಂದ್‌ ಎಂಬ ಉಗ್ರ ಸಂಘಟನೆ ಜೊತೆಗೂ 2019-20ರಿಂದ ಕಾಂಟ್ಯಾಕ್ಟ್‌ನಲ್ಲಿದ್ರು ಅನ್ನೋ ಮಾಹಿತಿನೂ ಹೊರಬಿದ್ದಿದೆ. ಆದ್ರಿಂದ ಕೆಫೆ ಸ್ಫೋಟದ ಪ್ರಕರಣ ಸುತ್ತಾ ಇದೀಗ ಹೊಸ ಹೊಸ ಅನುಮಾನಗಳು ಸೃಷ್ಟಿಯಾಗಿದ್ದು…NIA ತಂಡ ಪಾಕಿಸ್ತಾನದ ಲಿಂಕ್‌ನ್ನ ಬೇಧಿಸೋಕೆ ಹೊರಟಿದೆ.

-masthmagaa.com

Contact Us for Advertisement

Leave a Reply