ದೆಹಲಿಯಲ್ಲಿ ನೈಟ್​ ಕರ್ಫ್ಯೂ ಜಾರಿ.. ಗುಜರಾತ್​ನಲ್ಲಿ ವೀಕೆಂಡ್ ಕರ್ಫ್ಯೂ ಸಾಧ್ಯತೆ!

masthmagaa.com:

ಕೊರೋನಾ ಕಂಟ್ರೋಲ್ ಮಾಡಲು ದೆಹಲಿ ಸರ್ಕಾರ ನೈಟ್​ ಕರ್ಫ್ಯೂ ಜಾರಿ ಮಾಡಿದೆ. ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್​ ಕರ್ಫ್ಯೂ ಇರಲಿದೆ. ಈ ಅವಧಿಯಲ್ಲಿ ಜನರು ಅನಗತ್ಯವಾಗಿ ಓಡಾಡುವಂತಿಲ್ಲ. ಆದ್ರೆ ಅಗತ್ಯ ಸೇವೆಗಳು ಇರಲಿದೆ. ಬಸ್, ಮೆಟ್ರೋ, ಆಟೋ, ಟ್ಯಾಕ್ಸಿ ಅಥವಾ ಇತರ ವಾಹನಗಳು ಸಂಚರಿಸಲು ಅವಕಾಶ ಇದ್ದರೂ ಅಗತ್ಯ ಸೇವೆಗಳಲ್ಲಿ ತೊಡಗಿರೋರನ್ನ ಮಾತ್ರ ಕರ್ಕೊಂಡ್​ ಹೋಗಲು ಅವಕಾಶ ನೀಡಲಾಗಿದೆ. ರಾಜ್ಯದ ಒಳಗೆ ಮತ್ತು ರಾಜ್ಯ-ರಾಜ್ಯಗಳ ನಡುವಿನ ಸಂಚಾರದ ಮೇಲೆ ಯಾವುದೇ ನಿರ್ಬಂಧ ಇರೋದಿಲ್ಲ ಅಂತ ಸರ್ಕಾರ ಹೇಳಿದೆ. ಈ ನಿಯಮ ಏಪ್ರಿಲ್​ 30ರವರೆಗೆ ದೆಹಲಿಯಲ್ಲಿ ಜಾರಿಯಲ್ಲಿರಲಿದೆ. ದೆಹಲಿಯಲ್ಲಿ ಪಾಸಿಟಿವಿಟಿ ರೇಟ್​ 5 ಪರ್ಸೆಂಟ್ ದಾಟಿದೆ. ಅಂದ್ರೆ 100 ಜನಕ್ಕೆ ಕೊರೋನಾ ಪರೀಕ್ಷೆ ಮಾಡಿದ್ರೆ 5ಕ್ಕೂ ಹೆಚ್ಚು ಜನರಿಗೆ ಪಾಸಿಟಿವ್ ಬರ್ತಿದೆ. ದೇಶದ ಪಾಸಿಟಿವಿಟಿ ರೇಟ್​ 6 ಪರ್ಸೆಂಟ್​ಗೂ ಹೆಚ್ಚಿದೆ.

ಅತ್ತ ಗುಜರಾತ್​ನಲ್ಲಿ ಕೊರೋನಾ ಪ್ರಕರಣ ಹೆಚ್ಚಾಗ್ತಿರೋದನ್ನ ಗಮನಿಸಿರೋ ಗುಜರಾತ್ ಹೈಕೋರ್ಟ್​ ವೀಕೆಂಡ್ ಕರ್ಫ್ಯೂ ಜಾರಿ ಮಾಡೋ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಅಂತ ಸೂಚಿಸಿದೆ. ಜೊತೆಗೆ ರಾಜ್ಯದಲ್ಲಿ ಲಾಕ್​ಡೌನ್ ಜಾರಿ ಮಾಡೋ ಅವಶ್ಯಕತೆ ಇದೆ ಅಂತಾನೂ ಹೇಳಿದೆ.

-masthmagaa.com

Contact Us for Advertisement

Leave a Reply