INDIA ಮೀಟಿಂಗ್‌ನಲ್ಲಿ ಬಿಹಾರ ಸಿಎಂ ನಿತೀಶ್‌ ಕುಮಾರ್‌ ʻಹಿಂದಿ’ ಪಾಠ!

masthmagaa.com:

INDIA ಕೂಟದ ನಾಯಕರ 4ನೇ ಸಭೆಯಲ್ಲಿ ಬಿಹಾರ್‌ ಸಿಎಂ ನಿತೀಶ್‌ ಕುಮಾರ್‌, DMK ಪಕ್ಷದ ನಾಯಕನಿಗೆ ಹಿಂದಿ ಪಾಠ ಭೋದಿಸಿದ್ದಾರೆ. ಸತತ 3 ಗಂಟೆಗಳ ಕಾಲ ನಡೆದ ಸುದೀರ್ಘ ಮೀಟಿಂಗ್‌ನಲ್ಲಿ ಬಿಹಾರ ಸಿಎಂ ನಿತೀಶ್‌ ಹಿಂದಿಯಲ್ಲಿ ಮಾತನಾಡ್ತಿದ್ದ ವೇಳೆ, DMK ನಾಯಕ TR ಬಾಲು ನಿತೀಶ್‌ರ ಭಾಷಣವನ್ನ ಭಾಷಾಂತರಿಸಿ ಅಂತ ಕೈ ಸನ್ನೆ ಮಾಡಿದ್ರು. ಭಾಷಾಂತರಕ್ಕೆ ಅನುಮತಿ ಕೋರಿದಾಗ ಕೋಪಗೊಂಡ ನಿತೀಶ್‌, ʻನಮ್ಮ ರಾಷ್ಟ್ರ ಹಿಂದೂಸ್ಥಾನ, ನಮ್ಮ ರಾಷ್ಟ್ರ ಭಾಷೆ ಹಿಂದಿ, ಅದನ್ನ ನಾವೆಲ್ಲ ತಿಳಿದಿರಬೇಕುʼ ಅಂತ ಗದರಿದ್ದಾರೆ. ಜೊತೆಗೆ ತಮ್ಮ ಭಾಷಣವನ್ನ ಭಾಷಾಂತರ ಮಾಡಬೇಡಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply