ಅಯ್ಯಯ್ಯೋ! ರೈಲಿನ ಒಳಗೆ ಒಳ ಉಡುಪಿನಲ್ಲಿ ಕಾಣಿಸಿಕೊಂಡ ಶಾಸಕ!

masthmagaa.com:

ಬಿಹಾರದ ಜೆಡಿಯು ಶಾಸಕ ಗೋಪಾಲ್ ಮಂಡಲ್​​ ಬರೀ ಒಳ ಉಡುಪಿನಲ್ಲೇ ರೈಲಿನಲ್ಲಿ ಓಡಾಡಿದ್ದಾರೆ. ಶಾಸಕರ ಅವಸ್ಥೆ ನೋಡೋಕ್ಕಾಗದ ಉಳಿದ ಪ್ರಯಾಣಿಕರು ಆರ್​ಪಿಎಫ್​ ಮತ್ತು ಟಿಟಿಇಗೆ ಕಂಪ್ಲೇಂಟ್​ ಮಾಡಿದ್ದಾರೆ. ಬಳಿಕ ಅವರು ಎರಡೂ ಕಡೆಯವರನ್ನ ಸಮಾಧಾನ ಪಡಿಸಿದ್ದಾರೆ ಅಂತ ಭಾರತೀಯ ರೈಲ್ವೆ ಹೇಳಿದೆ. ಏನ್​ ಸಾರ್ ಹಿಂಗೆಲ್ಲಾ ಓಡಾಡಿದ್ದೀರಲಾ ನಿಮ್ಗೆ ಏನೂ ಅನಿಸಿಲ್ವಾ ಅಂತ ಶಾಸಕರನ್ನ ಕೇಳಿದ್ರೆ, ನಂಗೆ ಹೊಟ್ಟೆ ಸರಿ ಇರಲಿಲ್ಲ. ಹೀಗಾಗಿ ಹಾಗೆ ಓಡಾಡ್ಬೇಕಾಯ್ತು ಎಂದಿದ್ದಾರೆ.

-masthmagaa.com

Contact Us for Advertisement

Leave a Reply