“KD ಸೆಟ್‌ನಲ್ಲಿ ಬಾಂಬ್‌ ಬ್ಲಾಸ್ಟ್‌ ಆಗಿಲ್ಲ”: ವದಂತಿಗೆ ತೆರೆ ಎಳೆದ ಸಂಜಯ್‌ ದತ್‌

masthmagaa.com:

ಸಂಜಯ್ ದತ್ ಅವರು ಕೆಡಿ ಸೆಟ್‌ನಲ್ಲಿ ಗಾಯಗೊಂಡಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮಿಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ಇದೀಗ ಸಂಜಯ್‌ ದತ್‌ ತಮ್ಮ ಟ್ವಿಟರ್ ಅಕೌಂಟನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಪ್ರೇಮ್‌ ನಿರ್ದೇಶನದ ಮತ್ತು ಆಕ್ಷನ್‌ ಪ್ರಿನ್ಸ್‌ ಧೃವ ಸರ್ಜಾ ಅಭಿನಯದ ಕೆಡಿ ಚಿತ್ರದಲ್ಲಿ ಸಂಜಯ್‌ ದತ್‌ ಅವರು ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳ್ತಾಇದಾರೆ. ಇದೇ ಚಿತ್ರದ ಬಾಂಬ್‌ ಬ್ಲಾಸ್ಟ್‌ ಶೂಟಿಂಗ್‌ ವೇಳೆ ಸಂಜಯ್‌ ದತ್‌ಗೆ ಗಾಯ ಆಗಿತ್ತು ಅನ್ನೋ ವದಂತಿ ಹಬ್ಬಿತ್ತು. ಇದೇ ವಿಷಯಕ್ಕೆ ಸಂಬಂಧಿಸಿ ನಟ ತಮ್ಮ ಟ್ಟಿಟ್ಟರ್‌ ಅಕೌಂಟ್‌ನಲ್ಲಿ ಆಕ್ಸಿಡೆಂಟ್‌ ಕುರಿತು ಬರೆದುಕೊಂಡಿದ್ದಾರೆ.

ಇದೆಲ್ಲಾ ಸುಳ್ಳು ಸುದ್ದಿ ಎಂದು ಹೇಳಿರುವ ನಟ, “ನಾನು ಗಾಯಗೊಂಡಿರುವ ವರದಿಗಳಿವೆ. ಅದು ಸಂಪೂರ್ಣವಾಗಿ ಸುಳ್ಳು ಅಂತ ನಾನೇ ಸ್ಪಷ್ಠನೆ ನೀಡ್ತೀನಿ. ದೇವರ ದಯೆಯಿಂದ ನಾನು ಚೆನ್ನಾಗಿ ಮತ್ತು ಆರೋಗ್ಯವಾಗಿದ್ದೇನೆ. ನಾನು ಕೆಡಿ ಚಿತ್ರ ಶೂಟಿಂಗ್‌ನಲ್ಲಿ ಬ್ಯೂಸಿ ಇದೀನಿ. ಶೂಟಿಂಗ್‌ ಟೈಮಲ್ಲಿ ಚಿತ್ರತಂಡ ಹೆಚ್ಚಿನ ಎಚ್ಚರಿಕೆ ವಹಿಸಿದೆ. ನಿಮ್ಮ ಕಾಳಜಿಗಾಗಿ ಎಲ್ಲರಿಗೂ ಧನ್ಯವಾದಗಳು.” ಎಂದು ಬರೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply