ಚತ್ತೀಸ್​ಗಢ ಸಿಎಂ ವಿರುದ್ಧ ಎಫ್​ಐಆರ್! ಯಾಕೆ ಗೊತ್ತಾ?

masthmagaa.com:

ಚತ್ತೀಸ್​ಗಢದ ಸಿಎಂ ಭುಪೇಶ್ ಸಿಂಗ್ ಭಗೇಲ್​​ ತಂದೆ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಬ್ರಾಹ್ಮಣರನ್ನು ಬಹಿಷ್ಕರಿಸುವ ಬಗ್ಗೆ ನೀಡಿದ ಹೇಳಿಕೆ ಸಂಬಂಧ ಪೊಲೀಸರು ಈ ಕೇಸ್ ಹಾಕಿದ್ದಾರೆ. ಉತ್ತರ ಪ್ರದೇಶದಲ್ಲಿ ಮಾತನಾಡಿದ್ದ ನಂದ ಕುಮಾರ್ ಭಗೇಲ್​​, ಈ ದೇಶದ ಗ್ರಾಮಸ್ಥರು ತಮ್ಮ ಗ್ರಾಮದೊಳಗೆ ಬ್ರಾಹ್ಮಣರನ್ನು ಬರೋಕೆ ಬಿಡಬಾರದು. ಈ ಸಂಬಂಧ ನಾನು ಎಲ್ಲಾ ಸಮುದಾಯದ ಜೊತೆಗೆ ಮಾತುಕತೆ ನಡೆಸುತ್ತೇನೆ. ಬ್ರಾಹ್ಮಣರೆಲ್ಲರನ್ನು ವೋಲ್ಗಾ ನದಿ ತೀರಕ್ಕೆ ಕಳುಹಿಸಬೇಕು ಅಂತ ಹೇಳಿದ್ರು. ತಮ್ಮ ತಂದೆ ವಿರುದ್ಧ ಎಫ್​ಐಆರ್ ಬಗ್ಗೆ ಪ್ರತಿಕ್ರಿಯಿಸಿರೊ ಸಿಎಂ ಭುಪೇಶ್ ಸಿಂಗ್ ಭಗೇಲ್​, ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ನನ್ನ ತಂದೆ ಕೋಮುಸೌಹಾರ್ಧ ಹಾಳು ಮಾಡೋಕೆ ಯತ್ನಿಸಿದ್ದು, ಅವರ ಹೇಳಿಕೆಯಿಂದ ನನಗೇ ಬೇಜಾರಾಗಿದೆ. ನಾನು ಕಾನೂನು ಪರವಾಗಿ ನಿಲ್ತೀನಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply