ಸರ್ಜಿಕಲ್‌ ಸ್ಟ್ರೈಕ್‌ ಗೆ ಪ್ರೂಫ್‌ ಕೇಳಿದ ಕಾಂಗ್ರೆಸ್‌!

masthmagaa.com:

ಭಾರತ ಸೇನೆ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ ಬಗ್ಗೆ ಕಾಂಗ್ರೆಸ್‌ ನಾಯಕರು ಮತ್ತೆ ಅನುಮಾನ ವ್ಯಕ್ತಪಡಿಸಿದ್ದು ಕೇಂದ್ರದ ಮೇಲೆ ಟೀಕಾ ಪ್ರಹಾರವನ್ನ ಮುಂದುವರೆಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಸೇನೆ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ ಹಾಗೂ ಪುಲ್ವಾಮದಲ್ಲಿ ನಡೆದ ದಾಳಿಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸರ್ಕಾರ ಇಲ್ಲಿವರೆಗೂ 2016ರಲ್ಲಿ ಮಾಡಿದೀವಿ ಅಂತ ಹೇಳಿಕೊಳ್ಳುವ ಸರ್ಜಿಕಲ್‌ ಸ್ಟ್ರೈಕ್‌ ಬಗ್ಗೆ ಯಾವುದೇ ವರದಿಯನ್ನ ಸಂಸತ್ತಿನ ಮುಂದೆ ಇಟ್ಟಿಲ್ಲ. ಕೇಂದ್ರ ಸರ್ಕಾರ ಬರೀ ಸುಳ್ಳು ಸುದ್ದಿಗಳನ್ನ ಹರಡುತ್ತಿದೆ ಅಂತ ಸಿಂಗ್‌ ಆರೋಪಿಸಿದ್ದಾರೆ. ಜೊತೆಗೆ 2019ರಲ್ಲಿ ಪುಲ್ವಾಮದಲ್ಲಿ ನಡೆದ ಉಗ್ರ ದಾಳಿಯಲ್ಲಿ 40 ಸಿಆರ್‌ಪಿಎಫ್‌ ಯೋಧರು ಹುತಾತ್ಮರಾದ್ರು. ಈ ವೇಳೆ ಸಿಬ್ಬಂದಿಯನ್ನ ಏರ್‌ಲಿಫ್ಟ್‌ ಮಾಡ್ಬೇಕು ಅಂತ ಸಿಆರ್‌ಪಿಎಫ್‌ ಅಧಿಕಾರಿಗಳು ಕೇಳಿಕೊಂಡಿದ್ರು. ಆದ್ರೆ ಪ್ರಧಾನಿ ಮೋದಿ ಅದನ್ನ ನಿರಾಕರಿಸಿದ್ರು. ಪುಲ್ವಾಮಾ ದಾಳಿ ಬಳಿಕ ಸರ್ಜಿಕಲ್ ಸ್ಟ್ರೈಕ್‌ ನಡೆಸಲಾಗಿದೆ ಅಂತ ಹೇಳಿಕೊಂಡ್ರು. ಆದ್ರೆ ಅದಕ್ಕೂ ಪುರಾವೆಗಳನ್ನ ತೋರಿಸಲಿಲ್ಲ. ಇಲ್ಲಿಯವರೆಗೆ ದಾಳಿ ಕುರಿತು ಪಾರ್ಲಿಮೆಂಟ್‌ನಲ್ಲಿ ವಿವರ ನೀಡಿಲ್ಲ ಅಂತ ಸಿಂಗ್‌ ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರೋ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಕಾಂಗ್ರೆಸ್‌ ಮತ್ತೊಮ್ಮೆ ಸರ್ಜಿಕಲ್‌ ಸ್ಟ್ರೈಕ್‌ ಅನ್ನ ಪ್ರಶ್ನೆ ಮಾಡ್ತಿದೆ. ಪುಲ್ವಾಮ ಬಗ್ಗೆ ಮಾತನಾಡಿದ್ದು ಪಾಕಿಸ್ತಾನ ಮಾತಾಡಿದಂತಿದೆ. 26/11ರ ದಾಳಿ ವೇಳೆ ದಿಗ್ವಿಜಯ ಸಿಂಗ್‌ ಭಾರತವನ್ನೇ ದೂಷಣೆ ಮಾಡಿದ್ರು. ರಾಹುಲ್ ಜಿ ಸೇನಾ ಕಿ ಪಿಟೈ ಹೋ ಗಯಿ ಅಂತ ಹೇಳಿದ್ರು. ಇದು INC ಅಲ್ಲ… PPP- ಪಾಕ್ ಪರಸ್ತ್ ಪಾರ್ಟಿ.. ನಮ್ಮ ಪಡೆಗಳ ಮೇಲೆ ದಾಳಿ ಮಾಡಲು ಇಷ್ಟಪಡುತ್ತದೆ ಇದು ನಾಚಿಕೆಗೇಡಿನ ವಿಚಾರ ಅಂತ ಹೇಳಿದ್ದಾರೆ. ಇತ್ತ ಬಿಜೆಪಿ ಗೌರವ್‌ ಭಾಟಿಯಾ ಪ್ರತಿಕ್ರಿಯಿಸಿ, ನಮ್ಮ ಭದ್ರತಾ ಪಡೆಗಳ ವಿರುದ್ಧ ಯಾರಾದರೂ ಮಾತನಾಡುವುದನ್ನು ದೇಶ ಸಹಿಸುವುದಿಲ್ಲ. ಪ್ರಧಾನಿ ಮೋದಿಯವರ ಮೇಲಿನ ದ್ವೇಷದಿಂದಾಗಿ, ರಾಹುಲ್ ಗಾಂಧಿ ಮತ್ತು ದಿಗ್ವಿಜಯ ಸಿಂಗ್ ಅವರಲ್ಲಿ ಈಗ ದೇಶಭಕ್ತಿನೇ ಉಳಿದಿಲ್ಲ ಅಂತ ಕಿಡಿಕಾರಿದ್ದಾರೆ. ಇನ್ನು ಕಾಂಗ್ರೆಸ್‌ ಈ ವಿವಾದದಿಂದ ಅಂತರ ಕಾಯ್ದುಕೊಂಡಿದೆ. ಅದು ಅವರ ವೈಯಕ್ತಿಕ ಹೇಳಿಕೆ, ಪಕ್ಷದ್ದಲ್ಲ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply