ವ್ಯಾಕ್ಸಿನ್ ಹಾಕಿಸಿಕೊಳ್ಳದಿದ್ರೆ ರೇಷನ್ ಇಲ್ಲ: ಚಾಮರಾಜನಗರ ಡಿಸಿ ಆದೇಶ

masthmagaa.com:

ಕೊರೋನಾ ಲಸಿಕೆ‌ ಪಡೆಯದೇ ಇರೋರಿಗೆ ಸೆಪ್ಟೆಂಬರ್ 1ರಿಂದ ಪಡಿತರ, ಪಿಂಚಣಿ ಕೊಡಬಾರ್ದು ಅಂತ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದ ಚಾಮರಾಜನಗರ ಜಿಲ್ಲಾಧಿಕಾರಿ‌ ಡಾ. ಎಂ.ಆರ್. ರವಿ ವಿರುದ್ಧ ಭಾರಿ ವಿರೋಧ ಕೇಳಿ ಬಂದಿದೆ. ಲಸಿಕಾ ಕೇಂದ್ರಗಳ ಮುಂದೆ ಕ್ಯೂ ನಿಂತ್ರೂ ಲಸಿಕೆ ಸಿಗ್ತಿಲ್ಲ. ಬಹುತೇಕ ಲಸಿಕಾ ಕೇಂದ್ರಗಳಲ್ಲಿ ಇಲ್ಲಿ ಲಸಿಕೆ ಇಲ್ಲ, ಅಲ್ಲಿಗೆ ಹೋಗಿ ಅಂತ ಹೇಳೋದೇ ಆಗಿದೆ. ಅಲ್ಲಿಗೆ ಹೋದ್ರೆ ಅಲ್ಲೂ ಇರಲ್ಲ. ಮತ್ತೊಂದುಕಡೆ ಹೋಗಿ ಅನ್ನೋದೇ ಆಯ್ತು. ಇಂಥಾ ಟೈಮಲ್ಲಿ ನಿಮ್ಮ ಈ ರೂಲ್ಸ್ ಎಲ್ಲಾ ಬೇಕಾ? ಮೊದಲು ಲಸಿಕೆ ಸಿಗೋಥರ ಮಾಡಿ. ಸ್ಟಾಕ್​ ಇದಿಯಾ ನೋಡ್ಕೊಳ್ಳಿ. ಆಮೇಲೆ ಈ ರೂಲ್ಸ್ ಎಲ್ಲಾ ಜಾರಿಗೆ ತನ್ನಿ. ಅತ್ತ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವೀಯ ಕೂಡ, ಗೂಗಲ್​ನಲ್ಲಿ ಇನ್ಮುಂದೆ ‘ಕೋವಿಡ್​ ವ್ಯಾಕ್ಸಿನ್ ನಿಯರ್ ಮಿ’ ಅಂತ ಸರ್ಚ್ ಮಾಡಿದ್ರೆ ಹತ್ತಿರದ ಲಸಿಕೆ ಲಭ್ಯತೆ ಬಗ್ಗೆ. ಮಾಹಿತಿ ಸಿಗುತ್ತೆ ಮತ್ತು ಸ್ಲಾಟ್​ ಅನ್ನ ಬುಕ್ ಮಾಡ್ಬೋದು ಅಂತಾನೂ ಹೇಳಿದ್ದಾರೆ. ಮಾನ್ಯ ಆರೋಗ್ಯ ಸಚಿವರೇ, ಈಗ ಬಹುತೇಕ ಕಡೆ ವ್ಯಾಕ್ಸಿನ್​ ಸೆಂಟರ್​ಗೆ ಹೋದ್ರೆ ಮಾತ್ರ ಲಸಿಕೆ ಸಿಗೋದು. ನೀವು ಹೇಳಿದಂತೆ ಸ್ಲಾಟ್​ ಬುಕ್ ಮಾಡೋಕೆ ಅವಕಾಶನೇ ಇರಲ್ಲ.

-masthmagaa.com

Contact Us for Advertisement

Leave a Reply