ಲಿಥಿಯಂ ಅಯಾನ್‌ ಬ್ಯಾಟರಿ ಅಭಿವೃದ್ಧಿಗೆ ಕೊಡುಗೆ ನೀಡಿದ್ದ ವಿಜ್ಞಾನಿ ಜಾನ್ ಬಿ ಗುಡ್‌ನಫ್!

masthmagaa.com:

ಜಾಗತಿಕವಾಗಿ ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌, ಫೇಸ್‌ಮೇಕರ್‌, ಎಲೆಕ್ಟ್ರಿಕ್‌ ಕಾರು, ಎಲೆಕ್ಟ್ರಿಕ್‌ ಬೈಕ್‌, ಎಲೆಕ್ಟ್ರಿಕ್‌ ಬಸ್‌ ಇತ್ಯಾದಿಗಳಲ್ಲಿ ಲಿಥಿಯಂ ಅಯಾನ್‌ ಬ್ಯಾಟರಿಯನ್ನ ಬಳಸಲಾಗುತ್ತಿದೆ. ಇಂತಹ ತಂತ್ರಜ್ಞಾನವನ್ನ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ನೋಬಲ್‌ ಪ್ರಶಸ್ತಿ ವಿಜೇತ ಅಮೆರಿಕದ ವಿಜ್ಞಾನಿ ಜಾನ್ ಬಿ ಗುಡ್‌ನಫ್ ಭಾನುವಾರ ನಿಧನರಾಗಿದ್ದಾರೆ. ಇವರಿಗೆ 100 ವರ್ಷ ವಯಸ್ಸಾಗಿತ್ತು. ಅಂದ್ಹಾಗೆ 2019ರ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ಬ್ರಿಟಿಷ್ ಮೂಲದ ಅಮೆರಿಕನ್‌ ವಿಜ್ಞಾನಿ ಎಂ. ಸ್ಟಾನ್ಲಿ ವಿಟಿಂಗ್‌ಹ್ಯಾಮ್ ಮತ್ತು ಜಪಾನ್‌ನ ಅಕಿರಾ ಯೋಶಿನೋ ಅವರೊಂದಿಗೆ ಹಂಚಿಕೊಂಡಿದ್ದರು.

-masthmagaa.com

Contact Us for Advertisement

Leave a Reply