ಉತ್ತರ ಕೊರಿಯಾದಲ್ಲಿ ಕೊರೊನಾ ಸ್ಪೋಟ? ಈಗೇನಾಯ್ತು ಗೊತ್ತಾ?

masthmagaa.com:

ಉತ್ತರ ಕೊರಿಯಾದಲ್ಲಿ ಕೊರೊನಾ ಸ್ಪೋಟ ಆಗಿದೆ ಅನ್ನೋ ವದಂತಿಗಳಿಗೆ ಈಗ ಬರ್ತಿರೋ ಒಂದೊಂದೇ ವರದಿಗಳು ಪುಷ್ಠಿ ನೀಡ್ತಾಇವೆ. ನಿನ್ನೆಯಷ್ಟೇ ಕೊರೊನಾಗೆ ಒಂದು ಬಲಿ ಆಗಿದೆ ಅಂತ ಅಲ್ಲಿನ ಸರ್ಕಾರವೇ ಅಧಿಕೃತ ಮಾಹಿತಿ ನೀಡಿತ್ತು. ಆದ್ರೆ ಈಗ ಮತ್ತೊಂದು ವರದಿ ಹೊರ ಬರ್ತಯಿದ್ದು ವಿಪರೀತ ಜ್ವರದಿಂದ ಸುಮಾರು 21ಜನರು ಪ್ರಾಣ ಬಿಟ್ಟಿದ್ದಾರೆ ಅಂತ ಹೇಳಲಾಗ್ತಿದೆ. ಅಲ್ಲದೇ ನಿನ್ನೆ ಒಂದೇ ದಿನ ಕೊರೊನಾ ಲಕ್ಷಣಗಳಿಂದ ಸುಮಾರು 1,75000 ಸಾವಿರ ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಂತ ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ. 2 ವರೆ ಕೋಟಿ ಜನಸಂಖ್ಯೆ ಇರುವ ಕಿಮ್‌ನ ಕೊರಿಯಾದಲ್ಲಿ ಒಂದೇ ದಿನ ಇಷ್ಟು ಸಂಖ್ಯೆಯ ಜನ ಆಸ್ಪತ್ರೆಗೆ ಸೇರಿರೋದು ತುಂಬಾನೇ ದೊಡ್ಡ ನಂಬರ್‌. ಇದಿಷ್ಟು ಸರ್ಕಾರದ ಅಧಿಕೃತ ಮಾಹಿತಿ. ಇನ್ನು ಹೇಳದೇ ಇರೋ ಕೇಸ್‌ಗಳು, ಸಾವುಗಳು ಇನ್ನೆಷ್ಟು ಇದೆಯೋ ಅವರಿಗೇ ಗೊತ್ತು.

-masthmagaa.com

Contact Us for Advertisement

Leave a Reply