ಅಮೆರಿಕ ಅಧ್ಯಕ್ಷ ಬೈಡೆನ್​​​ಗೆ ಉತ್ತರ ಕೊರಿಯಾ ವಾರ್ನಿಂಗ್!

masthmagaa.com:

ಕ್ಷಿಪಣಿ ಪರೀಕ್ಷೆ ಮಾಡಿದ್ದಕ್ಕೆ ಎಚ್ಚರಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಬೈಡೆನ್​​​​ಗೆ ಉತ್ತರ ಕೊರಿಯಾ ಖಾರವಾಗಿಯೇ ಪ್ರತಿಕ್ರಿಯಿಸಿದೆ. ಸೇನಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳೋದಾಗಿ ತಿಳಿಸಿದೆ. ಇತ್ತೀಚೆಗೆ ಉತ್ತರ ಕೊರಿಯಾ ತನ್ನ ಪೂರ್ವ ಸಮುದ್ರಕ್ಕೆ ಎರಡು ಖಂಡಾಂತರ ಕ್ಷಿಪಣಿಗಳನ್ನು ಪ್ರಯೋಗಿಸಿತ್ತು. ಬೈಡೆನ್ ಅಧಿಕಾರಕ್ಕೆ ಬಂದ ಬಳಿಕ ಉತ್ತರ ಕೊರಿಯಾ ನಡೆಸಿದ ಮೊದಲ ಕ್ಷಿಪಣಿ ಪರೀಕ್ಷ ಇದಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅಮೆರಿಕ ಅಧ್ಯಕ್ಷ ಬೈಡೆನ್, ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿಗಳ ಪ್ರಯೋಗ ನಡೆಸೋದು ವಿಶ್ವಸಂಸ್ಥೆಯ ನಿರ್ಣಯಗಳ ಉಲ್ಲಂಘನೆಯಾಗಿದೆ. ಉತ್ತರ ಕೊರಿಯಾ ಪ್ರಚೋದಿಸಲು ಯತ್ನಿಸಿದ್ರೆ, ಅದಕ್ಕೆ ತಕ್ಕ ಪ್ರತಿಕ್ರಿಯೆಯೂ ಇರುತ್ತೆ ಅಂತ ಎಚ್ಚರಿಸಿದ್ರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಕೊರಿಯಾದ ಕ್ಷಿಪಣಿ ಕಾರ್ಯಕ್ರಮದ ಅಧಿಕಾರಿ ರಿ ಪ್ಯೋಂಗ್ ಚೋಲ್​, ಬೈಡೆನ್ ಅವರ ಹೇಳಿಕೆ ನಮ್ಮ ದೇಶದ ಬಗ್ಗೆ ಅವರಿಗಿರುವ ಆಳವಾದ ದ್ವೇಷ, ಹಗೆತನವನ್ನು ತೋರಿಸುತ್ತೆ. ಇದು ನಮ್ಮ ದೇಶದ ಸ್ವಯಂ ರಕ್ಷಣೆ ಹಕ್ಕನ್ನು ಕಿತ್ತುಕೊಳ್ಳುವ, ಪ್ರಚೋದಿಸುವ ಹೇಳಿಕೆಯಾಗಿದೆ ಅಂತ ಕಿಡಿಕಾರಿದ್ದಾರೆ. ಉತ್ತರ ಕೊರಿಯಾ ನಿರಂತರವಾಗಿ ಸೈನ್ಯ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಅಮೆರಿಕ ಹೀಗೇ ಮಾಡ್ತಾ ಹೋದ್ರೆ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತೆ ಅಂತ ಎಚ್ಚರಿಸಿದ್ದಾರೆ. ಅಂದಹಾಗೆ ಅಮೆರಿಕ, ಉತ್ತರ ಕೊರಿಯಾ ಜೊತೆಗಿನ ನೀತಿಗಳನ್ನು ಪರಿಶೀಲನೆ ನಡೆಸುತ್ತಿರುವ ಹೊತ್ತಲ್ಲೇ ರಿ ಪ್ಯೊಂಗ್ ಚೋಲ್​​​ ಈ ಹೇಳಿಕೆ ಬಂದಿದೆ.

-masthmagaa.com

Contact Us for Advertisement

Leave a Reply