ತಿಂಗಳ ಬಳಿಕ ಪಬ್ಲಿಕ್ಕಾಗಿ ಕಾಣಿಸಿಕೊಂಡ ಕಿಮ್ ಜಾಂಗ್ ಉನ್!

masthmagaa.com:

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹತ್ತತ್ರ ಒಂದು ತಿಂಗಳ ಬಳಿಕ ಜನರ ಮುಂದೆ ಬಂದಿದ್ದಾನೆ. ದೇಶದ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿರುವ ವಿಚಾರವಾಗಿ ಕಿಮ್ ಜಾಂಗ್ ಉನ್ ತಮ್ಮ ವರ್ಕರ್ ಪಾರ್ಟಿಯ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಕೊರಿಯಾ ಸೆಂಟ್ರಲ್ ನ್ಯೂಸ್ ಏಜೆನ್ಸಿಯ ಪ್ರಕಾರ ಕಿಮ್ ಜಾಂಗ್ ಉನ್ ಕಪ್ಪು ಬಣ್ಣದ ಮಾವೋ ಸೂಟ್ ಧರಿಸಿ ಮೀಟಿಂಗ್ ಮಾಡ್ತಿರೋದು ಕಂಡು ಬಂದಿದೆ. ದೇಶದ ಆರ್ಥಿಕ ಕಾರ್ಯಗಳು ಮತ್ತು ಜನರ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕೂಡಲೇ ಬಗೆಹರಿಸೋ ಸಮಯ ಬಂದಿದೆ ಅಂತ ಹೇಳಿದ್ಧಾರೆ. ಉತ್ತರ ಕೊರಿಯಾದಲ್ಲಿ ದೀರ್ಘಕಾಲದ ನಿರ್ಬಂಧಗಳಿಂದ ಅರ್ಥವ್ಯವಸ್ಥೆ ತುಂಬಾ ಹದಗೆಟ್ಟುಹೋಗಿತ್ತು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಆರ್ಥಿಕತೆ ಸ್ವಲ್ಪ ಚಿಗುರಿಕೊಂಡಿತ್ತು. ಆದ್ರೀಗ ಕೊರೋನಾ ಮತ್ತು ಅಮೆರಿಕದ ನಿರ್ಬಂಧಗಳಿಂದ ಮತ್ತೆ ಅರ್ಥವ್ಯವಸ್ಥೆ ಹದಗೆಟ್ಟು ಹೋಗಿದೆ. ಹೀಗಾಗಿ ಅರ್ಥವ್ಯವಸ್ಥೆಗೆ ಚುರುಕುಮುಟ್ಟಿಸೋ ಕುರಿತು ಚರ್ಚಿಸಿದ್ದಾರೆ ಕಿಮ್​.. ಅಂದಹಾಗೆ ಮೇ 6ರಂದು ಸೇನಾ ಕುಟುಂಬಗಳೊಂದಿಗೆ ಕಾಣಿಸಿಕೊಂಡಿದ್ದ ಕಿಮ್ ಜಾಂಗ್ ಉನ್, ಆಮೇಲೆ ಇಡೀ ತಿಂಗಳು ಪಬ್ಲಿಕ್ಕಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಕರಾವಳಿ ತೀರದ ತನ್ನ ಬಂಗಲೆಯಲ್ಲಿ ಕುಳಿತು ಒಂದೋ ದೇಶದ ಆಡಳಿತ ನೋಡ್ಕೊಳ್ತಿದ್ರು. ಅಥವಾ ಮೋಜು ಮಸ್ತಿಯಲ್ಲಿ ತೊಡಗಿರಬಹುದು ಅಂತ ಮಾಧ್ಯಮಗಳು ವರದಿ ಮಾಡಿವೆ. ಈ ಭಾಗದಲ್ಲಿ ಈ ಒಂದು ತಿಂಗಳಲ್ಲಿ ತುಂಬಾ ಚಲನವಲನ ಹೆಚ್ಚಿರೋದು ಉಪಗ್ರಹ ಚಿತ್ರದಲ್ಲಿ ಗೊತ್ತಾಗಿದೆ. ಇನ್ನು 37 ವರ್ಷದ ಕಿಮ್ ಜಾಂಗ್ ಉನ್ ತೂಕ ತುಂಬಾ ಜಾಸ್ತಿ ಇದ್ದು, ಹೆವೀ ಸಿಗರೇಟ್ ಎಳೀತಾರೆ.. ಹೀಗಾಗಿ ಹಲವು ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಕೊರೋನಾದಿಂದ ರಕ್ಷಣೆಗಾಗಿ ಆಗಾಗ ನಾಪತ್ತೆಯಾಗ್ತಿದ್ದಾರೆ ಅನ್ನೋ ಚರ್ಚೆ ಕೂಡ ನಡೀತಾ ಇದೆ. 2020ರಿಂದೆ ಈವರೆಗೆ 7 ಬಾರಿ ನಾಪತ್ತೆಯಾಗಿದ್ದಾರೆ ಕಿಮ್ ಜಾಂಗ್ ಉನ್.

-masthmagaa.com

Contact Us for Advertisement

Leave a Reply